Sunday, May 24, 2020

"ಕುದಿ ಎಸರು"

ಈ ವರ್ಷದ (೨೦೨೦) ಕೇಂದ್ರೀಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪಡೆದ  ಕನ್ನಡ ಸಾಹಿತ್ಯದ ಕೃತಿ, "ಕುದಿ ಎಸರು" . ಇದರ ಲೇಖಕಿ ಕನ್ನಡ ಸಾಹಿತ್ಯ ಕ್ಷೇತ್ರದ ಸುಪ್ರಸಿದ್ಧ  ವಿಮರ್ಶಕಿ ಹಾಗೂ ಪತ್ರಕರ್ತೆ ಡಾ, ವಿಜಯ.  ಇವರು ತಮ್ಮ ಆತ್ಮ ಕತೆಯನ್ನು ಈ ಕೃತಿಯಲ್ಲಿ ಎಳೆ  ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಧ್ಯಮ ವರ್ಗದ ಬ್ರಾಹ್ಮಣ  ಹೆಣ್ಣು ಮಗಳೊಬ್ಬಳು ಒಬ್ಬ ಸ್ಯಾಡಿಸ್ಟ್ ಗಂಡನ ಕೈಲಿ  ಸಿಕ್ಕು ಪಟ್ಟ ಪಾಡುಗಳನ್ನು ವಿವರವಾಗಿ ಹೆಣೆದಿದ್ದಾರೆ. ಪೀಠಿಕೆ ಓದಿದಾಗ.. ಪುಸ್ತಕದುದ್ದಕ್ಕೂ ಅಳಿಸ್ತಾರೆ  ಇವರು ಎಂದುಕೊಂಡಿದ್ದೆ, ಆದರೆ  ಹಾಗೇನೂ ಇರಲಿಲ್ಲ,  ಸಾಧಾರಣ ಘಟನೆಗಳನ್ನೇ ಉತ್ತಮವಾಗಿ ಹೆಣೆದಿದ್ದಾರೆ. 
ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದಲ್ಲಿ  ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ  ಅತ್ಯಾಚಾರ  ಕೇಳಿ ಬೆಚ್ಚಿ ಬಿದ್ದಿದ್ದೇವೆ. ಹೀಗೂ ಮಾಡುತ್ತಾರಾ, ಇವರು ನುಷ್ಯರೇನ  ಎಂದೆನಿಸುತ್ತಿತ್ತು. ಆದರೆ ಡಾ. ವಿಜಯ ಅವರ ಕತೆಯಲ್ಲಿ, ಗಂಡನಿಂದಲೇ ಆ ರೀತಿಯ ಸಂಕಟಗಳನ್ನನುಭವಿಸಿದ್ದನ್ನು ಕೇಳಿ ಅತ್ಯಂತ ಬೇಸರವಾಯಿತು. ಅದಕ್ಕೆ ದೇವರೇ ಶಿಕ್ಷೆ ಕೊಡಬೇಕು.
ತೆಲುಗು  ಮಾತೃಭಾಷೆಯಾದ್ದರಿಂದ, ಹಲವಾರು ಕಡೆ ತೆಲುಗಿನ ವಾಕ್ಯಗಳನ್ನು ಹಾಗೆ ಉಳಿಸಿಕೊಂಡಿದ್ದಾರೆ. ತೆಲುಗಿನ ಗಂಧ ಗಾಳಿ ತಿಳಿಯದವರಿಗೆ ಸ್ವಲ್ಪ ಕಷ್ಟವಾದೀತು. 
ಹಲವಾರು ಪುರುಷ ಲೇಖಕರು ಹೇಗೆ ಹೆಣ್ಣು  ಮಕ್ಕಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿ  ಕೊಳ್ಳುತ್ತಾರೆ  ಎಂಬುದನ್ನೂ ಸಹಾ ವಿವರಿಸಿದ್ದಾರೆ. ಅದು ಎಲ್ಲ ಕ್ಷೇತ್ರದಲ್ಲೂ ಇರುವುದೇ. 
ಸಾಮಾನ್ಯ  ಹೆಣ್ಣು ಹತ್ತನೆಯ ತರಗತಿ ಓದಿದ್ದವಳು ಸಂಸಾರದ ಕಷ್ಟಗಳ ನಡುವೆ, ಗಂಡನ ಕಿರುಕಳದ  ನಡುವೆ  ಒಳ್ಳೆಯ ಪತ್ರಕರ್ತೆಯಾಗಿ,  ಕನ್ನಡಲ್ಲಿ ಪಿ ಎಚ್ ಡಿ  ಮಾಡಿ ಅತ್ಯುನ್ನತ  ಸಾಹಿತ್ಯ ಕ್ಷೇತ್ರದ ಪ್ರಶಸ್ತಿಯನ್ನು ಪಡೆದ ಡಾ ವಿಜಯ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. 
ನನಗೆ ಅನಿಸಿದ ಇನ್ನೊಂದು ವಿಷಯ, ನಮ್ಮಲ್ಲಿ ಎಷ್ಟೋ ಮಂದಿ ಹೆಂಗಸರು ಒಳ್ಳೆಯ ಗಂಡನನ್ನು ಪಡೆದು ಉತ್ತಮ ದಾಂಪತ್ಯ ಜೀವನವನ್ನು ನಡೆಸುತ್ತಿದ್ದೇವೆ. ಆದರೂ ಸಣ್ಣ ಸಣ್ಣ ವಿಷಯಗಳಿಗೆ ಅತೃಪ್ತಿ,  ಅಶಾಂತಿ. ಕ್ಷುಲ್ಲಕ ವಿಷಯಗಳಿಗೆ ಮನೆಯಲ್ಲಿ ಗಲಾಟೆ, ಗಲಭೆ, ಖಿನ್ನತೆ. ಇಂತಹವರ ಕತೆ ಓದಿದಾಗ  ನಾವು ಭಾಗ್ಯವಂತರು ಎಂಬುದನ್ನು ಅರಿತು  ನೆಮ್ಮದಿಯಲ್ಲಿ ಬಾಳಬೇಕು.

ಡಾ. ವಿಜಯ ಅವರು ತಮ್ಮ ವೈಯುಕ್ತಿಕ  ಜೀವನವನ್ನು  ಈ ಕೃತಿಯಲ್ಲಿ ವಿವರಿಸಿ, ವೃತ್ತಿ ಜೀವನವನ್ನು ಮುಂದಿನ ಸಂಚಿಕೆಯಲ್ಲಿ ಬರೆಯುವುದಾಗಿ ಭರವಸೆ ಕೊಟ್ಟಿದ್ದಾರೆ. ಅವರು ಇಷ್ಟೆಲ್ಲಾ ಕಷ್ಟಗಳ ನಡುವೆ ಅತ್ಯನ್ನತ ಪದವಿಯನ್ನೇರಿದ ವಿವರಗಳನ್ನು ಓದುವ ಕಾತರ ನಮಗಿದೆ. ಅದರ ನಿರೀಕ್ಷೆಯಲ್ಲಿ... ಕವಿತಾ ವಿ ರಾವ್ 
ಇದೇ  ತಿಂಗಳ  ೨೩ ರಂದು ಕರಾಚಿಯಲ್ಲಿ ನಡೆದ ದುರ್ಘಟನೆ ಜಗತ್ತಿನಾದ್ಯಂತದ ನಾಗರಿಕ ವಿಮಾನಯಾನಕ್ಕೆ ಎಚ್ಚರಿಸುವಂತಿದೆ.   ಆದದ್ದೇನೆಂದರೆ, ಶುಕ್ರವಾರ ಲಾಹೋರ್ ನಿಂದ ಕರಾಚಿಗೆ  ಸುಮಾರು ೯೯ ನಾಗರಿಕರನ್ನು ಹೊತ್ತು ಹೋರಟ   ಏರ್ ಬಸ್  A 320 ವಿಮಾನ  ಕರಾಚಿಯ ಬಳಿ ನೆಲಕ್ಕುರುಳಿ ಹಲವರ ಜೀವವನ್ನು ಬಲಿ  ತೆಗೆದುಕೊಂಡಿದೆ. ಹಾರಾಟದ ಸಮಯದಲ್ಲಿ ಎರಡೂ ಎಂಜಿನ್ ಗಳ  ವೈಫಲ್ಯದಿಂದ ಈ ದುರಂತ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ.   ಈ ಘಟನೆ  ೧೯೯೬ ಫೆಬ್ರವರಿ ಆರರಂದು ನಡೆದ ಇನ್ನೊಂದು ವಿಮಾನ ಅಪಘಾತದ ನೆನಪು ತರುತ್ತದೆ. ಅದು ಬರ್ಗೆನೇರ್    ವಿಮಾನ ೩೦೧.  ೧೮೯ ನಾಗರಿಕರನ್ನು ಹೊತ್ತ ವಿಮಾನ ತಾಂತ್ರಿಕ ದೋಷದಿಂದ  ಅಟ್ಲಾಂಟಿಕ್ ಮಹಾ ಸಾಗರಕ್ಕೆ ಅಪ್ಪಳಿಸಿತು. ಈ ವಿಮಾನವು  ಸುಮಾರು ೨೦ ದಿನಗಳ ಕಾಲ ಬಳಕೆಯಲ್ಲಿರಲಿಲ್ಲ.  ವಾಯುವೇಗವನ್ನು ಅಳೆಯುವ ಉಪಕರಣ (pitot tube) ದೊಳಗೆ ಒಂದು ಕೀಟ ಗೂಡು (wast nest) ಕಟ್ಟಿತ್ತು.  ವಿಮಾನದ ಹಾರಾಟದಲ್ಲಿ ಪೈಲಟ್ ಗಳಿಗೆ ವಾಯು ವೇಗದ ತಪ್ಪು ಮಾಹಿತಿಯನ್ನು ರವಾನಿಸುತ್ತಿತ್ತು.  ನುರಿತ ಪೈಲಟ್ ಗಳಿಗೂ ನಿಯಂತ್ರಣ ಮಾಡಲಾಗಲಿಲ್ಲ.  ವಿಮಾನ ನಿರ್ವಹಣಾ ತಂಡದಿಂದ ಉಂಟಾದ  ಸಣ್ಣ ಪ್ರಮಾದ ದಿಂದ ಈ ದುರಂತ ಸಂಭವಿಸಿತು. 
ಕೊರೊನಾ  ಲಾಕ್ ಡೌನ್ ನಿಂದ ಹಲವಾರು ವಿಮಾನಗಳು ಬಳಕೆಯಾಗದೆ ನಿಂತಿವೆ . ಹಾರಾಟದ ಮುನ್ನ ಅತ್ಯಂತ ಹೆಚ್ಚಿನ ಮುಂಜಾಗರೂಕತೆ ಕ್ರಮಗಳನ್ನು  ತೆಗೆದುಕೊಳ್ಳುವ ಅವಶ್ಯಕತೆಯಿದೆ.

Recent news on Karachi  Air Crash  due to engine failure warns the whole civil aviation community in the  world. This incident reminds me Birgenair Flight 301 which crashed on Feb 6th, 1996. The reason behind the crash was, the aircraft was not in use for 20 days. There was an error from a pitot tube which was reading wrong air speed. After investigation, they found that there was wasp nest built inside the pitot tube. A small maintenance error caused huge loss. All 189 passengers travelling were dead. After this incident, they started to close the exposed pitot tube by a cap when the aircraft  is not in use.  Removal of that cap before flight was another challenge. 
Now, due to corona lock down, many aircraft are not in use and it requires necessary measures to avoid such accidents. 

Friday, May 15, 2020

ಏನೋ ಮಾಡಲು ಹೋಗಿ

ಲಾಕ್ ಡೌನ್ ಆದಾಗಿನಿಂದಾ  ಪರಿಸ್ಥಿತಿ ಹೀಗಿದೆ, ಮನೆಯಲ್ಲಿ  ಎಲ್ಲೆಲ್ಲಿಯೂ ನಿಶಬ್ದ. ಎಲ್ಲರೂ ತಮ್ಮ ತಮ್ಮ ಫೋನ್ ಗಳಲ್ಲಿ ಅಥವಾ ಲ್ಯಾಪ್ ಟಾಪ್ ಗಳಲ್ಲಿ  ಬಿಸಿಯಾಗಿದ್ದಾರೆ.  ನಾನು ನನ್ನ ಕುರ್ಚಿಯಿಂದ ಎದ್ದು ಮೆಲ್ಲಗೆ ಬೆಕ್ಕಿನ ಹಾಗೆ ಬೆಡ್ ರೂಮ್ ಗೆ ಹೋದೆ. ನನ್ನ ಸ್ನೇಹಿತ  ಟೆಕ್ಸ್ ಟೈಲ್ ಇಂಜಿನೀರ್, ಆತ ನನಗೆ ಒಂದು ಸಲಹೆ ಕೊಟ್ಟಿದ್ದ.  ವಾಟ್ಸಾಪ್ ನಲ್ಲಿ ಒಂದು ದೊಡ್ಡ ಸಂದೇಶ ಕಳಿಸಿದ್ದ. ಕೊರೋನ ವೈರಾಣುವನ್ನು  ತಡೆಯಲು ಮನೆಯಲ್ಲೇ ಸುಲಭವಾಗಿ, ಅಗ್ಗವಾಗಿ ತಯಾರುಮಾಡ ಬಹುದಾದಂತಹ ಮಾಸ್ಕ್ ಬಗ್ಗೆ ಬರೆದಿದ್ದ. ಮಾಸ್ಕನ್ನು ಮೂರು ಪದರಗಳಿಂದ ಮಾಡಬೇಕು.  ಹೊರಗಿನ ಪದರ ಜೀನ್ಸ್ ಪ್ಯಾಂಟ್  ಮೆಟೀರಿಯಲ್ ಆಗಿರಬೇಕು, ಏಕೆಂದರೆ ಅದು ಟ್ವಿಲ್  ವೀವ್ ಆದ ಕಾರಣ  ವೈರಾಣುಗಳುಳ್ಳ ಹನಿಗಳು ಒಳಗೆ ಪ್ರವೇಶಿಸುವುದಿಲ್ಲ. ಎರಡನೆಯ ಪದರ ಪಾಲಿಯೆಸ್ಟರ್ ಆಗಿರಬೇಕು ಹಾಗೂ ಮೂರನೆಯ ಪದರ ಬನಿಯನ್ ವಸ್ತ್ರ (ನಮ್ಮ ಚರ್ಮಕ್ಕೆ ಹಾನಿಯಾಗದಂತೆ) ಬಳಸಬೇಕು. ಇಷ್ಟು ಮಾಹಿತಿ ನನಗೆ ಸಾಕಿತ್ತು, ಅವುಗಳನ್ನು ಪಡೆಯುವ  ಯೋಜನೆಯನ್ನು ಅತ್ಯಂತ ಉತ್ಸಾಹದಿಂದ ಶುರುಮಾಡಿದೆ. ಮಾಸ್ಕ್ ತಯಾರಿಸುವ  ಸುಲಭ ಪ್ರಕ್ರಿಯೆಗಳ  ಬಗ್ಗೆ ಜಾಲತಾಣಗಳಲ್ಲಿ ಸಿಕ್ಕ ಇಲ್ಲಾ  ವಿಡಿಯೋಗಳನ್ನು  ನೋಡಿದೆ. ಈ ಮೂರು  ವಸ್ತ್ರಗಳು ಎಲ್ಲಿ ಸಿಗುತ್ತವೆ? ಹೊರಗೆ ಹೋಗಲು ಸಾಧ್ಯವಿಲ್ಲ. ನನಗೆ ಹೊಳೆದ  ಅದ್ಭುತ ಉಪಾಯವೆಂದರೆ, ನನ್ನ ಪತಿರಾಯರ ಕಪಾಟು.  ಮೆಲ್ಲಗೆ ಹೋಗಿ ಒಂದು ಜೀನ್ಸ್ ಪ್ಯಾಂಟ್, ಒಂದು ಪಾಲಿಯೆಸ್ಟರ್ ಅಂಗಿ, ಒಂದು ಬನಿಯನನ್ನು ಕಳ್ಳತನದಿಂದ ತೆಗೆದುಕೊಂಡು ಯಾರಿಗೂ ಕಾಣದ ಹಾಗೆ  ಮಹಡಿಯ ಮೇಲಿರುವ ನನ್ನ ಕೋಣೆಗೆ  ಹೋದೆ. ಅಳೆಯುವ ಟೇಪ್ ನಿಂದ ಬಟ್ಟೆಯ ಮೇಲೆ ಮಾರ್ಕ್ ಮಾಡಿದೆ. ಕತ್ತರಿಸಲು ಕತ್ತರಿ ತೆಗೆದೆ, ಅದು ಮೊಂಡಾಗಿತ್ತು, ಕತ್ತರಿಸಲಾಗಲಿಲ್ಲ. ಪಕ್ಕದ ಮನೆಯ ಗಾಯತ್ರಿಯನ್ನು ಕೇಳಿ ಬೇರೆ ಕತ್ತರಿಯನ್ನು ತಂದೆ.  ಹೊಲಿಗೆಯಂತ್ರ ಬಳಸದೆ ಅಟ್ಟದ ಮೇಲಿಟ್ಟು ವರ್ಷಗಳೇ ಆಗಿದ್ದವು. ಅದನ್ನು ತೆಗೆದು  ಹೊಲಿಗೆ  ಸರಿಯಾಗಿ  ಬೀಳುತ್ತದೋ ನೋಡಲು ಯಂತ್ರದ ಸ್ವಿಚ್ ಆನ್ ಮಾಡಿದೆ. ಕಟಕಟ ಶಬ್ದ ಮಾಡ ತೊಡಗಿತು. ಒಳಗೆಲ್ಲಾ ಇದ್ದ ಧೂಳು ತೆಗೆದು, ಎಲ್ಲೆಲ್ಲಿ ಘರ್ಷಣೆ ಇತ್ತೋ ಅಲ್ಲಿ ತೆಂಗಿನ ಎಣ್ಣೆ ಹಾಕಿದೆ, ಸ್ವಲ್ಪ ಶಬ್ದ ಕಡಿಮೆಯಾಯಿತು, ನಿಟ್ಟುಸಿರು ಬಿಟ್ಟೆ.  ಜೀನ್ಸ್ ಪ್ಯಾಂಟ್ ನ್ನು  9" X 6"  ಆಯತಾಕಾರಕ್ಕೆ ತುಂಡರಿಸಲು ಯತ್ನಿಸಿದೆ. ಮಾರ್ಕ್ ಮಾಡಿದ ಬಟ್ಟೆಯನ್ನು ಕತ್ತರಿಸಲು ಹೋದೆ, ಅದು   ಸೊಟ್ಟ ಸೊಟ್ಟವಾಗಿ ಮೊಟ್ಟೆಯಾಕಾರಕ್ಕೆ ಬಂದಿತ್ತು. ಪ್ರಯತ್ನ ಬಿಡಲಿಲ್ಲ. ಒಂದು ಪ್ಯಾಂಟ್ ಪೂರ್ತಿಯಾಗಿ ತುಂಡು ತುಂಡಾಗಿತ್ತು. ಹತ್ತು ರೋಗಿಗಳು ಸತ್ತಮೇಲೆ ಹನ್ನೊಂದನೇ  ಆಪರೇಷನ್  ನಲ್ಲಿ ರೋಗಿಯನ್ನು ಉಳಿಸಿದ ವೈದ್ಯನಂತೆ ಸಂತೋಷಪಟ್ಟೆ. ಕಡೆಗೂ ಆಯತಾಕಾರದ 
ತುಂಡು ತಯಾರಾಯಿತು. ಹಾಗೆಯೇ  ಶರ್ಟ್ ಮತ್ತು ಬನಿಯನ್ ಕೂಡಾ ಬಲಿತೆಗೆದುಕೊಂಡ ಮೇಲೆ  ಹೊಲಿಯಲು ಕೂತೆ. ಸೂಜಿಯೊಳಗೆ ದಾರ ಹಾಕಬೇಕು. ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ , ವಯಸ್ಸಿನ ಪರಿಣಾಮ. ಮೊಬೈಲ್ ಫೋನ್ ನಲ್ಲಿದ್ದ ಫ್ಲಾಶ್ ಲೈಟ್ ಹಾಕಿಕೊಂಡು ಹೇಗೋ ದಾರ ಹಾಕಿ  ಹೊಲಿಯಲು ಪ್ರಾರಂಭಿಸಿದೆ. "ಆ....!!! " ಎಂದು ಚೀರಿದ್ದು ಮಾತ್ರ ನೆನಪು ನಂತರ ಏನಾಯ್ತೋ  ತಿಳಿಯಲಿಲ್ಲ. ಮೂರ್ಛೆ  ಹೋಗಿ ೫- ೧೦ ನಿಮಿಷ ಆಗಿರಬೇಕು ಕಣ್ತೆರೆದಾಗ ... ಮನೆ ಮಂದಿಯೆಲ್ಲ ನನ್ನ ಮುಂದಿದ್ದರು.  ಎಡಗೈ ತೋರುಬೆರಳು ನೋವಾಗುತ್ತಿತ್ತು. ಸರಿಯಾಗಿ ನೆನಪು ಮಾಡಿಕೊಂಡೆ. ಹೊಲಿಗೆ  ಶುರು ಮಾಡಿದ ತಕ್ಷಣ ಸೂಜಿ ನನ್ನ ತೋರುಬೆರಳಿನಿಂದ ಹಾದು ಹೋಗಿತ್ತು. ಅಷ್ಟಕ್ಕೇ ತಲೆತಿರುಗಿ ಬಿದ್ದಿದ್ದೆ. ನನ್ನ ಗಂಡ ಬಂದು ಸೂಜಿಯನ್ನು ಬೆರಳಿನಿಂದ ಬೇರ್ಪಡಿಸಿದ್ದರು. ಪುಣ್ಯಕ್ಕೆ ಈ ಬಾರಿ ಸೂಜಿ ಸಂಪೂರ್ಣ ವಾಗಿ ಹೊರಗೆ  ಬಂದಿತ್ತು. ಕೆಲವು ವರ್ಷಗಳ ಹಿಂದೆ ಹೀಗೆ ಹೊಲಿಗೆಯಂತ್ರದ  ಸೂಜಿ  ಎಡಗೈ ತೋರುಬೆರಳಲ್ಲಿ ಸಿಕ್ಕಿ ಹಾಕಿಕೊಂಡು ಅದು ಎರಡು ತುಂಡಾಗಿತ್ತು. ಒಂದು ತುಂಡು ಬೆರಳಿನ ಮೂಳೆಗೆ   ಅಂಟಿಕೊಂಡಿತ್ತು . ನಂತರ ಶಸ್ತ್ರ ಚಿಕಿತ್ಸೆ ಮಾಡಿ ತೆಗೆಸಿದ್ದಾಯಿತು. ಆ  ಘಟನೆ ನಡೆದ ನಂತರ ನನ್ನ ಹೊಲಿಗೆ  ಯಂತ್ರವನ್ನು ಅಟ್ಟಕ್ಕೆ ಸೇರಿಸಿದ್ದೆವು. 
ಕೊರೋನಾ ಲಾಕ್ ಡೌನ್ ಸಮಯದಲ್ಲಿ ಕಾಲ ಕಳೆಯಲು  ಮಾಸ್ಕ್ ತಯಾರಿಸಿ ಸಮಾಜ ಸೇವೆ ಮಾಡುವ ಉದ್ದೇಶದಿಂದ ಏನೋ ಮಾಡಲು ಹೋಗಿ ಎಲ್ಲಾ ಎಡವಟ್ಟಾಗಿತ್ತು. 
ಆಮೇಲೇನು... ಒಳ್ಳೆ ಪ್ಯಾಂಟ್, ಶರ್ಟ್ ಗಳನ್ನು ನಾಶಮಾಡಿದ್ದಕ್ಕೆ ಪತಿರಾಯರಿಂದ ಮಹಾ ಮಂಗಳಾರತಿ ಆಯಿತು.
                                           ---   x  ----













ಪ್ರೊ. ನಿಸಾರ್

ಪ್ರೊ. ನಿಸಾರ್ ಅವರ ಬಗ್ಗೆ ಚರ್ಚೆ ಆಗ್ತಾ ಇರೋದು ನೋಡಿದ್ರೆ,  ನನ್ನ ಮನದಾಳದ ಮಾತನ್ನು ಹಂಚಿಕೊಳ್ಳುವ ಆಸೆಯಾಗಿದೆ.
ಅವರ ನಿಧನದ ಮರುದಿನ ನನಗೆ ವಾಟ್ಸಾಪ್ ನಲ್ಲಿ ಈ ಕವನ " ನಿಮ್ಮೊಡನಿದ್ದು ನಿಮ್ಮಂತಾಗದೆ " ಬಂದಿತ್ತು. ಇದಕ್ಕೆ ಸ್ವಲ್ಪ ಪೀಠಿಕೆ ಕೂಡ ಇತ್ತು. ನನಗೆ ಆಗ ಸ್ವಲ್ಪ ಬೇಸರವಾಯಿತು. ಇಷ್ಟು ಒಳ್ಳೆಯ  ಕವಿಯನ್ನು ಮುಸಲ್ಮಾನರೆಂದು ಸಂಶಯವಾಗಿ ನೋಡಿದ್ದವರು ಯಾರೋ?... ಎಂದೆಲ್ಲಾ ಆಲೋಚಿಸಿದೆ. ಆದರೆ ಆ ಸಂದೇಶವನ್ನು ಬೇರೆಯವರಿಗೆ ರವಾನಿಸಲು ಮನಸು ಬರಲಿಲ್ಲ.  ಅದಕ್ಕೊಂದು ಕಾರಣ ಇದೆ. ಕಳೆದ ವರ್ಷ ಅಂದರೆ  ೨೦೧೯ ರ ನವಂಬರ್ ೧ ರಂದು ನಮ್ಮ  ಎನ್ ಎ ಎಲ್  ಕನ್ನಡ ಸಾಂಸ್ಕೃತಿಕ ಸಂಘ ನಿಸಾರ್ ಅವರ ಕವನಗಳನ್ನು ಹಾಡುವ ಮೂಲಕ ರಾಜ್ಯೋತ್ಸವವವನ್ನು ಆಚರಿಸಿದೆವು. ಇಲ್ಲಿ ನನ್ನ ಕೆಲವು ಸಹೃದಯ ಮಿತ್ರರು ಹಾಡುಗಳನ್ನು ಅಭ್ಯಾಸ ಮಾಡಿದರೆ, ನನಗೆ ಕಾರ್ಯಕ್ರಮದ ನಿರೂಪಣೆ ಮಾಡುವ ಹೊಣೆ  ಬಿದ್ದಿತ್ತು. ನಿಸಾರ್ ಅವರ ಬಗ್ಗೆ ಮಾಹಿತಿ ಸಂಗ್ರಹಿಸಲು ಜಾಲತಾಣಗಳಲ್ಲಿ ಹುಡುಕಾಡಿದೆ. ಆಗ ನನಗೆ ದೊರೆತದ್ದು ಅವರು ಡಿಡಿ ಚಂದನ ಗೆ ನೀಡಿದ ಸಂದರ್ಶನ.  ಅವರ  ಕವನಗಳ ಬಗ್ಗೆ ಅವರೇ ಹೇಳಿಕೊಂಡಿರುವ ವಿಷಯಗಳನ್ನು ಪೋಣಿಸಿ ನಿರೂಪಣೆಗೆ  ಸಾಮಗ್ರಿಯನ್ನು ತಯಾರಿಸಿಕೊಂಡಿದ್ದೆ. ಇನ್ನೊಂದು ವಾಹಿನಿಯಲ್ಲಿ, ಸಂದರ್ಶಕ ..." ನೀವು ಮುಸಲ್ಮಾನರಲ್ಲವೇ...  ಅದು ... ಇದು " ಎಂದು ಕೆಣಕುತ್ತಿದ್ದ. ಅದಕ್ಕವರು ಖಡಕ್ ಆಗಿ ನಾನು ಇಲ್ಲಿನವ ... ಇಲ್ಲಿನ ಸಂಸ್ಕೃತಿಯೇ ನನಗೆ ಎಲ್ಲ ಎಂದು ಬಿಟ್ಟರು.  ಹೀಗೆ ಅವರ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಾ ಅವರ ಅಭಿಮಾನಿಯಾಗಿಬಿಟ್ಟಿದ್ದೆ.  ಎಷ್ಟೆಂದರೆ... ಒಮ್ಮೆ ಅವರನ್ನು ಭೇಟಿ ಮಾಡಿ ಅವರ ಕಾಲಿಗೆ ನಮಸ್ಕಾರ ಮಾಡಬೇಕು ಎನ್ನುವಷ್ಟು ಅಭಿಮಾನ  ಹೆಚ್ಚಾಗಿತ್ತು.  ಆದರೆ... ದುರದೃಷ್ಟವಶಾತ್ ಅವರ ನಿಧನದ ವಾರ್ತೆ ತುಂಬಾ ನೋವನ್ನುಟು ಮಾಡಿತು..  ಕೆಲವು ದಿನಗಳ ನಂತರ ... ಸರ್ ನಿಮ್ಮ ಎಫ್ ಬಿ ಪೋಸ್ಟ್ ನಲ್ಲಿ ಇದೇ ಕವನದ ನಿಜವಾದ ಅರ್ಥ ಓದಿದ ಮೇಲೆ  ನೆಮ್ಮದಿಯಾಯಿತು. ತಕ್ಷಣ ನಿಮ್ಮ ಪೋಸ್ಟ್ ನ್ನು ಮೊದಲು ನನಗೆ ಆ ಕವನವನ್ನು ಕಳಿಸಿದ ವ್ಯಕ್ತಿಗೆ ರವಾನಿಸಿದೆ. 
ಸಾಹಿತಿಗಳ ಬಗ್ಗೆ ನಡೆಯುತ್ತಿರುವ ಚಿಂತನದಲ್ಲಿ  ಭಾಗಿಯಾಗಿರುವುದಕ್ಕೆ ಹರ್ಷ ವ್ಯಕ್ತ  ಪಡಿಸುತ್ತೇನೆ. 
ಧನ್ಯವಾದಗಳು . 

Thursday, May 7, 2020

preenayamo

ವಂದಿತಾಶೇಷವಂದ್ಯೋರುವೃಂದಾರಕಂ ಚಂದನಾ ಚರ್ಚಿತೋ ದಾರಪೀನಾಂಸಕಮ್ |
ಇಂದಿರಾಚಂಚಲಾಪಾಂಗನೀರಾಜಿತಂ ಮಂದರೋದ್ಧಾರಿ ವೃತ್ತೋದ್ಭುಜಾಭೋಗಿನಂ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೧ ||
ಸೃಷ್ಟಿಸಂಹಾರಲೀಲಾವಿಲಾಸಾತತಂ ಪುಷ್ಟಷಾಡ್ಗುಣ್ಯ ಸದ್ವಿಗ್ರಹೋಲ್ಲಾಸಿನಮ್ |
ದುಷ್ಟ ನಿಷ್ಯೇಷಸಂಹಾರಕರ್ಮೋ ದ್ಯತಂ ಹೃಷ್ಟಪುಷ್ಟಾನುತಿಶಿಷ್ಟ ಪ್ರಜಾಸಂಶ್ರಯಂ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೨ ||
ಉನ್ನತಪ್ರಾರ್ಥಿತಾಶೇಷಸಂಸಾಧಕಂ ಸನ್ನತಾಲೌಕಿಕಾ ನಂದದ ಶ್ರೀಪದಮ್ |
ಭಿನ್ನಕರ್ಮಾಶಯಪ್ರಾಣಿಸಂಪ್ರೇರಕಂತನ್ನಕಿಂನೇತಿ ವಿದ್ವತ್ಸು ಮಿಮಾಂಸಿತಂ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೩ ||
ವಿಪ್ರಮುಖ್ಯೈಃ ಸದಾವೇದವಾದೋನ್ಮುಖೈಃ ಸುಪ್ರತಾಪೈಃ ಕ್ಷೀತಿಶೇಶ್ವರೈಶ್ಚಾರ್ಚಿತಂ |
ಅಪ್ರತರ್ಕ್ಯೋರುಸಂವಿದ್ಗುಣಂ ನಿರ್ಮಲಂ ಸಪ್ರಕಾಶಾಜರಾನಂದ ರೂಪಂಪರಂ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೪ ||
ಅತ್ಯಯೋ ಯಸ್ಯಕೇನಾಪಿನಕ್ವಾಪಿಹಿಪ್ರತ್ಯತೋ ಯದ್ಗುಣೇಷೂತ್ತಮಾನಾಂಪರಃ |
ಸತ್ಯಸಂಕಲ್ಪ ಏಕೋ ವರೇ ಣ್ಯೋ ವಶೀ ಮತ್ಯನೂನೈಃ ಸದಾ ವೇದವಾದೋದಿತಃ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೫ ||
ಪಶ್ಯತಾಂ ದುಃಖಸಂತಾನನಿರ್ಮೂಲನಂ ದೃಶ್ಯತಾಂ ದೃಶ್ಯತಾಮಿತ್ಯ ಜೇಶಾಚಿ(ರ್ಥಿ)ತಮ್ |
ನಶ್ಯತಾಂ ದೂರಗಂ ಸರ್ವದಾಪ್ಯಾತ್ಮಗಂ ಪಶ್ಯತಾಂ ಸ್ವೇಚ್ಚಯಾ ಸಜ್ಜನೇಷ್ವಾಗತಂ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೬ ||
ಅಗ್ರಜಂ ಯಃ ಸಸರ್ಜಾಜಮಗ್ರ್ಯಾಕೃತಿಂ ವಿಗ್ರಹೋಯಸ್ಯ ಸರ್ವೇಗುಣಾ ಏವ ಹಿ |
ಉಗ್ರ ಆದ್ಯೋಽಪಿ ಯಸ್ಯಾತ್ಮಜಾಗ್ರ್ಯಾತ್ಮಜಃ ಸದ್ಗೃಹೀತಃ ಸದಾಯಃ ಪರಂದೈವತಮ್ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೭ ||
ಅಚ್ಯುತೋ ಯೋ ಗುಣೈರ್ನಿತ್ಯಮೇವಾಖಿಲೈಃ ಪ್ರಚ್ಯುತೋಽಶೇಷ ದೋಷೈಃ ಸದಾಪೂರ್ತಿತ |
ಉಚ್ಯತೇ ಸರ್ವ ವೇದೋರು ವಾದೈರಜಃ ಸ್ವಚ್ಯತೇ ಬ್ರಹ್ಮರುದ್ರೇಂದ್ರ ಪೂರ್ವಯ್ ಸ್ಸದಾ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೮ ||
ಧಾರ್ಯತೇ ಯೇನವಿಶ್ವಂ ಸದಾಜಾದಿಕಂ ವಾರ್ಯತೇಶೇಷದುಃಖಂ ನಿಜಧ್ಯಾಯಿನಾಂ |
ಪಾರ್ಯತೇ ಸರ್ವಮನ್ಯೈರ್ನಯತ್ಪಾರ್ಯತೇ ಕಾರ್ಯತೇ ಚಾಖಿಲಂ ಸರ್ವಭೂತೈಃ ಸದಾ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೯ ||
ಸವಪಾಪಾನಿ ಯತ್ಸಂಸ್ಮೃತೇಃ ಸಂಕ್ಷಯಂ ಸರ್ವದಾ ಯಾಂತಿಭಕ್ತ್ಯಾವಿಶುದ್ಧಾತ್ಮನಾಂ |
ಶರ್ವಗುರ್ವಾದಿಗೀರ್ವಾಣ ಸಂಸ್ಥಾನದಃ ಕುರ್ವತೇ ಕರ್ಮ ಯತ್ಪ್ರೀತಯೆ ಸಜ್ಜನಾಃ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೧೦ ||
ಅಕ್ಷಯಂ ಕರ್ಮಯಸ್ಮಿನ್ ಪರೇಸ್ವರ್ಪಿತಂಽಪ್ರಕ್ಷ ಯಂ ಯಾಂತಿ ದುಃಖಾನಿಃಯನ್ನಾಮತ |
ಅಕ್ಷರೋಯೋಽಜರಃ ಸರ್ವದೈವಾಮೃತಃ ಕುಕ್ಷಿಗಂ ಯಸ್ಯ ವಿಶ್ವಂ ಸದಾಜಾದಕಮ್ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೧೧ ||
ನಂದಿತೀರ್ಥೋರುಸನ್ನಾಮಿನೋ ನಂದಿನಃ ಸಂದಧಾನಾಃ ಸದಾನಂದದೇವೇ ಮತಿಮ್ |
ಮಂದಹಾಸಾರುಣಾಪಾಂಗ ದತ್ತೋನ್ನತಿಂ ನಂದಿತಾ ಶೇಷದೇವಾದಿ ವೃಂದಂ ಸದಾ |
ಪ್ರೀಣಯಾಮೋ ವಾಸುದೇವಂ ದೇವತಾಮಂಡಲಾ ಖಂಡಮಂಡನಂ ಪ್ರೀಣಯಾಮೋ ವಾಸುದೇವಂ || ೧೨ ||
ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯ ವಿರಚಿತಂ

ಕೊರೋನಾ ಲಾಕ್ ಡೌನ್ ಕಲಿ ಸಿದ ಪಾಠ !

ಮನೆಯಿಂದಲೇ ಕೆಲಸಮಾಡುವ  ನಿಯಮ ಬಂದಾಗಿನಿಂದ ನನ್ನ ಕೋಣೆಯನ್ನು ಸಿದ್ದ ಗೊಳಿಸಿ ಲ್ಯಾಪ್ ಟಾಪ್, ಬರೆಯಲು ಪುಸ್ತಕ ಎಲ್ಲವನ್ನೂ ಚೊಕ್ಕಟವಾಗಿ ಜೋಡಿಸಿಕೊಂಡೆ. ಬೆಳಗ್ಗೆ ಹೆಂಡತಿ ಮಾಡಿಕೊಟ್ಟ ತಿಂಡಿ ತಿಂದು ನನ್ನ ಕೋಣೆಗೆ ಹೋಗಿ ಕೂತರೆ ಊಟದ ಸಮಯಕ್ಕೆ ಬರುವುದು, ಅದಾದ ನಂತರ ಮತ್ತೆ ಕೆಲಸ, ಸಂಜೆ ಎಲ್ಲರೂ ಭಜನೆ ಮಾಡುವ ವೇಳೆಗೆ ಬಂದು ಬಿಡುವುದು. ಇದೇ  ನನ್ನ ದಿನಚರಿಯಾಗಿದೆ . ೧೫ ವರ್ಷಗಳ ಹಿಂದೆ ನಾನು ಸಸ್ಯ ಶಾಸ್ತ್ರದಲ್ಲಿ ಪಿ ಎಚ್ ಡಿ ಮಾಡುವಾಗ, ಪ್ರಬಂಧವನ್ನು ಟೈಪ್ ಮಾಡುವಾಗ ಹೀಗೆ ನನ್ನ ಕೋಣೆಯಲ್ಲಿ  ಹಗಲು ರಾತ್ರಿ ಕಳೆಯುತ್ತಿದ್ದೆ. ಈಗ ನನ್ನ ಶಿಷ್ಯರ ಪ್ರಬಂಧವನ್ನು ತಿದ್ದುವ ಕೆಲಸದಲ್ಲಿ ಮಗ್ನನಾಗಿದ್ದೇನೆ. ಶಾಲೆಯ ದಿನಗಳಿಂದಲೂ ಓದು ವುದರಲ್ಲೇ  ನಿರತನಾಗಿದ್ದ ನನಗೆ ಬೇರೆ ಅಭಿರುಚಿಗಳಿಲ್ಲ. ಲಾಕ್  ಡೌನ್  ಆದಾಗಲಿಂದ  ಹೆಂಡತಿ ಮಕ್ಕಳ ಜೊತೆ ಸಿನಿಮಾ ನೋಡೋದು, ಕಾರ್ಡ್ಸ್ ಆಡುವುದು ಇತ್ಯಾದಿ ಕಲಿಯುತ್ತಿದೇನೆ.  ಟಿ ವಿ ಯಲ್ಲಿ ಮೋದಿಜಿ ಯವರ  ಭಾಷಣ ಕೇಳಿದೆ. ಈ ಸಮಯದಲ್ಲಿ ಯಾರು ಯಾರು ಹೇಗೆ ಸಮಯ ಕಳೆಯುತ್ತಿದ್ದಾರೆ ಎನ್ನುವುದರ ಬಗ್ಗೆ ಹೇಳಿದರು. ಕೆಲವರು ತಮ್ಮ ಹಳೆ ವೀಣೆ , ಗಿಟಾರ್ , ತಬಲಾ ತೆಗೆದು ಅಭ್ಯಾಸ ಮಾಡುತ್ತಿದ್ದಾರೆ, ಕೆಲವರು ತಮ್ಮ  ಶಾಲೆಯ, ಕಾಲೇಜಿನ ಹಳೆ ಸ್ನೇಹಿತರನ್ನು ವಾಟ್ಸಾಪ್ ಗುಂಪುಗಳಲ್ಲಿ ಭೇಟಿ ಮಾಡಿ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ... ಹೀಗೆಲ್ಲ ಮುಂದುವರೆದಿತ್ತು ಅವರ ಭಾಷಣ. ನನಗೂ ನನ್ನ  ಸ್ನೇಹಿತರನ್ನು ನೋಡುವ ಹಂಬಲ ಹೆಚ್ಚಾಯಿತು. ಮರುದಿನ ಮಕ್ಕಳ ಜೊತೆ ಕನ್ನಡ ಸಿನಿಮಾ (ಇತ್ತೀಚಿಗೆ ಬಂದದ್ದು ) ಮಾಲ್ಗುಡಿ ಡೇಸ್ ನೋಡಿದೆ. ನನ್ನ ಹಂಬಲ ಇನ್ನೂ ಬಲವಾಯಿತು. ಅಲ್ಲಿ ಇಲ್ಲಿ ಹುಡುಕಿ ನನ್ನ ಶಾಲೆಯ ಸ್ನೇಹಿತನೊಬ್ಬನಿಗೆ ಕರೆ ಮಾಡಿ  ಗುಂಪಿನಲ್ಲಿ ನನ್ನನ್ನು ಸೇರಿಸು ಎಂದೇ.  ನಂತರ ಎಲ್ಲರ ಪರಿಚಯ, ನೆನಪುಗಳು... ಕೆಲವರನ್ನು ಗುರುತಿಸಿದೆ. ಕೆಲವರು ಊಹಿಸಿದ್ದಕ್ಕಿಂತ ದಪ್ಪವಾಗಿದ್ದದ್ದರಿಂದ ಗುರ್ತಿಸಲು ಸಾಧ್ಯವಾಗಲಿಲ್ಲ. ನಾನು ಶಾಲೆಯ ದಿನಗಳಲ್ಲೂ ಯಾರೊಡನೆಯೂ ಹೆಚ್ಚು ಬೆರೆಯುತ್ತಿರಲಿಲ್ಲ. ಮಿತ  ಭಾಷಿಯಾಗಿದ್ದೆ, ಎಲ್ಲರೂ ತಂಟೆ ತರಲೆಗಳು ಮಾಡುತ್ತಿದ್ದರೆ ನಾನು ನೋಡಿಯೂ ನೋಡದಂತೆ ಇರುತ್ತಿದ್ದೆ. ಆ ಗುಂಪಿನಲ್ಲಿ ಪರಿಚಯವಾದ ಕೆಲವರು ನನಗೆ ಪ್ರತ್ಯೇಕವಾಗಿ ಸಂದೇಶಗಳನ್ನು ಕಳಿಸುತ್ತಿದ್ದರು. ನಾನು ಕೆಲವರಲ್ಲಿ ಮಾತನಾಡುತ್ತಿದ್ದೆ. ಕೆಲವರನ್ನು  ನಿರ್ಲಕ್ಷಿಸುತ್ತಿದ್ದೆ . 
ಒಂದು ದಿನ ಒಬ್ಬ  ಸ್ನೇಹಿತನ ಸಂದೇಶ ಬಂತು, ಆತನ ಹೆಸರು ಕರುಣಾಕರ್. ನನಗೆ ನೆನಪಿರುವ ಹಾಗೆ, ಆತ ಓದಿನಲ್ಲಿ  ಅಷ್ಟಕ್ಕಷ್ಟೇ ಇದ್ದ. ನಮ್ಮ ಶಾಲೆಯಲ್ಲಿ ಏಳನೆಯ ತರಗತಿಯ ವರೆಗೆ, ಕನ್ನಡ, ತಮಿಳು, ಇಂಗ್ಲಿಷ್ ಮಾಧ್ಯಮ ಇತ್ತು. ನಾನು ಮೊದಲಿನಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ್ದು. ಎಂಟನೇತರಗತಿಗೆ ಕನ್ನಡ ಮತ್ತು ತಮಿಳು ಮಾಧ್ಯಮದಿಂದ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮಕ್ಕೆ ವರ್ಗವಾಗುತ್ತಿದ್ದರು. ಅವರಿಗೆ ಸ್ವಲ್ಪ ಕಷ್ಟ ಆಗುತ್ತಿತ್ತು. ಈ ಕರುಣಾಕರ್ ಸಹ, ಹಾಗೆಯೇ ಕನ್ನಡ ಮಾಧ್ಯಮದಿಂದ ಬಂದವನು. ಅವನಿಗೆ ತಂದೆ ತೀರಿಕೊಂಡು  ತಾಯಿ ಉಪ್ಪಿನಕಾಯಿ ಮಾರಿ ಓದಿ ಸುತ್ತಿದ್ದರು. ಒಬ್ಬ ತಮ್ಮನೋ ತಂಗಿಯೋ ಇದ್ದ ಹಾಗೆ ನೆನಪು. ಎಂಟನೆಯ ತರಗತಿಯಲ್ಲಿ  ಗಣಿತದಲ್ಲಿ ಸೊನ್ನೆ ಅಂಕಗಳು ಬಂದಿದ್ದವು. ನೋಟ್ ಪುಸ್ತಕದಲ್ಲಿ  ಸರಿಯಾಗಿ ಬರೆದುಕೊಳ್ಳುತ್ತಿಲ್ಲ ಅಂತ ವಿಜ್ಞಾನದ ಟೀಚರ್ ಅವನನ್ನು ಬೈದದ್ದು ನನಗೆ ನೆನಪು. ಓದುವ ಮಕ್ಕಳು ಎಲ್ಲಿದ್ದರೂ ಓದುತ್ತಾರೆ, ನೀನು ಸರಿಯಾಗಿ ಅಭ್ಯಾಸ ಮಾಡುತ್ತಿಲ್ಲ ಅಷ್ಟೇ  ಎಂದು ಹೇಳಿದ್ದರು.  ಆತನ ಸಂದೇಶಗಳಿಗೆ ಆಗೊಮ್ಮೆ ಈಗೊಮ್ಮೆ ಉತ್ತರ ಕೊಡುತ್ತಿದ್ದೆ.  ನನ್ನ ಕೆಲಸದ ಬಗ್ಗೆ, ಪಿಎಚ್ ಡಿ  ವಿಷಯದ  ಬಗ್ಗೆ ಎಲ್ಲಾ ವಿಚಾರಿಸಿದ, ವಿವಿಧ ಹಣ್ಣುಗಳಲ್ಲಿ ಇರುವ ಆಸ್ಕೊರ್ಬಿಕ್ ಆಮ್ಲದ ಬಗ್ಗೆ ನನ್ನ  ಸಂಶೋಧನೆ ಎಂದೆಲ್ಲ ವಿವರಿಸಿದೆ. ಆತನ ಕೆಲಸದ ಬಗ್ಗೆ ನಾನು ಎಂದೂ ಕೇಳಲಿಲ್ಲ ... ಏನೋ ಯಾವುದೊ ಸಣ್ಣ ಕಂಪನಿಯಲ್ಲಿ  ಸಣ್ಣ ಉದ್ಯೋಗ  ಮಾಡ್ತಾ ಇರಬಹುದು ಎನ್ನುವುದು ನನ್ನ ಭಾವನೆ ಯಾಗಿತ್ತು. ಅವನ ಬಗ್ಗೆ   ಮೊದಲಿಂದ ಇದ್ದ ಕೀಳರಿಮೆ ಹಾಗೆಯೇ ಇತ್ತು.  

ಕೊನೆಗೆ ಒಂದು ದಿನ ನೀನು ಏನು ಮಾಡುತ್ತಿದ್ದೀಯ ಎಂದು ಕೇಳಿದೆ. ನಾನು ಇಸ್ರೋ ದಲ್ಲಿ ಇದ್ದೇನೆ ಎಂದ ... ಯಾವುದಾದರೂ ಗುಮಾಸ್ತಾ  ಕೆಲಸ ಇರಬಹುದು ಎಂದು ಕೊಂಡೆ. ಯಾವ ವಿಭಾಗದಲ್ಲಿ ಕೆಲಸಮಾಡುತ್ತಿದ್ದೀಯ ಎಂದು ಕೇಳಿದೆ, ನನಗೆ ಪರಿಚಿತರೊಬ್ಬರು ಇಸ್ರೋ ದಲ್ಲಿ ಇರುವ ಕಾರಣ.  ನಾನು ನೋದನ  ಶಾಸ್ತ್ರ (propulsion division ) ಎಂದ. ಏನು ಓದಿದ್ದೀ  ಎಂದು ಕೇಳಿದೆ, " ನಾನು ಐ ಐ ಟಿ , ಮದ್ರಾಸಿನಿಂದ ಪಿ ಎಚ್ ಡಿ ಮಾಡಿದೆ ೧೯೯೯ ರಲ್ಲಿ.  ಆಗ ನನಗೆ ತುಂಬಾ ಗಿಲ್ಟಿ ಆಯಿತು. ತಾಂತ್ರಿಕ ವಿಷಯದಲ್ಲಿ ಡಿಪ್ಲೋಮ ಮಾಡಿ ಕೆಲಸಕ್ಕೆ ಸೇರಿ, ಓದು ಮುಂದುವರೆಸಿ , ಸಂಜೆಯ ಕಾಲೇಜಿನಲ್ಲಿ ಇಂಜಿನೀರಿಂಗ್ ಮಾಡಿ ಎಂ. ಟೆಕ್ ಮಾಡಿ ಪಿ ಎಚ್ ಡಿ ಮಾಡಿ, ದೇಶದ  ಉನ್ನತ ಬಾಹ್ಯಾಕಾಶ ಸಂಸ್ಥೆಯಲ್ಲಿ ಉನ್ನತ ಮಟ್ಟದ ಸಂಶೋಧನೆ ಮಾಡುತ್ತಿದ್ದ. 
ನನ್ನ ಬಗ್ಗೆ ನನಗೆ ಜಿಗುಪ್ಸೆ ಹುಟ್ಟಿತು. ಶಾಲೆಯಲ್ಲಿ ವಿಜ್ಞಾನದ  ಟೀಚರ್ ಹೇಳಿದನ್ನು ನಿರೂಪಿಸಿದ್ದ. ಓದುವ ಮಕ್ಕಳು ಎಲ್ಲಿದ್ದರೂ ಓದುತ್ತಾರೆ. ಮುಂದೆ ಬರಬೇಕೆಂಬ ಛಲ ಇರಬೇಕು, ಸಾಧನೆ ಮಾಡಬೇಕು. ನಾನು ಏನಾದರೂ ಸಾಧಿಸಿಯೇ ತೀರುತ್ತೇನೆ ಎಂಬ ದೃಢ ನಂಬಿಕೆ ಇರಬೇಕು. ನನ್ನ ಸಣ್ಣ ಮಗ ಚೆನ್ನಾಗಿ ಅಂಕಗಳನ್ನು ಪಡೆಯುತ್ತಿಲ್ಲ ಎಂದು ಬೈಯುತ್ತಿದ್ದೆ.  ಈಗ ಅದನ್ನು ಬಿಟ್ಟಿದ್ದೇನೆ. ಶಾಲೆಯಲ್ಲಿ ಕಡಿಮೆ ಅಂಕಗಳು ಪಡೆದ ಮಾತ್ರಕ್ಕೆ ಯಾರೂ ಅಪ್ರಯೋಜಕರಾಗುವುದಿಲ್ಲ. ಈ ಘಟನೆಯ ನಂತರ ಎಲ್ಲರನ್ನೂ ಗೌರವಿಸಲು ಪ್ರಾರಂಭಿಸಿದೆ. ನನ್ನ ಕೆಲವು  ಸ್ನೇಹಿತರು ಉನ್ನತ ವ್ಯಾಸಂಗ ಮಾಡದಿದ್ದರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡುತ್ತಿದ್ದಾರೆ. ಯಾರಬಗ್ಗೆಯೂ ಕೀಳರಿಮೆ ಇಲ್ಲದೆ ವ್ಯವಹರಿಸುತ್ತಿದ್ದೇನೆ. ಇದೆ ನನಗೆ ಕೊರೋನಾ  ಲಾಕ್  ಡೌನ್  ಕಲಿ ಸಿದ ಪಾಠ !






















Tuesday, February 25, 2020

ಕಣ್ಣೀರು

ಮೊದಲ ದಿನ
ಆರು ತಿಂಗಳ ಮಗುವ
 ಶಿಶು  ವಿಹಾರದಿ   ಬಿಟ್ಟು
ಬರುವಾಗ ಹಾಕಿದೆ ಕಣ್ಣೀರು

ಮೊದಲ ದಿನ
ಬೋರ್ಡ್  ಎಗ್ಸಾಮ್ ಗೆ
ಪರೀಕ್ಷಾ ಕೇಂದ್ರಕ್ಕೆ  ಬಿಟ್ಟು
ಬರುವಾಗ ಹಾಕಿದೆ ಕಣ್ಣೀರು

ಈ  ಕಣ್ಣೀರಿಗೂ ಆ ಕಣ್ಣೀರಿಗೂ
ವ್ಯತ್ಯಾಸವಿಹುದು ನೋಡು
ಆಗಿನ ಕಣ್ಣೀರು
ಮಗುವಿನಿಂದ ದೂರ ಬಂದದ್ದಕ್ಕೆ
ಈಗಿನ ಕಣ್ಣೀರು
ಮಗಳು ನನ್ನಿಂದ ದೂರವಾಗುತ್ತಿರುವುದಕೆ... 

Friday, January 24, 2020

ದಟ್ಟ ಅಡವಿ

ಈ ದಿನ ನನ್ನ ಮಗಳೊಂದಿಗೆ ಮಾತನಾಡುತ್ತಾ ಬರುತ್ತಿದ್ದೆ. ಹೀಗೆ ಒಂದು ಪ್ರಶ್ನೆ ಕೇಳಿದಳು "ಅಮ್ಮ ಒಬ್ಬ ಹುಡುಗ ದೊಡ್ಡವನಾದ ಮೇಲೆ ವಿದೇಶಕ್ಕೆ ಹೋಗಲು ಆಶಿಸಿದರೆ ತಪ್ಪಾ". ಇದಕ್ಕೆ ನನ್ನ ಉತ್ತರ,  ಅಪ್ಪ ಅಮ್ಮ ಖುಷಿಯಿಂದ ಕಳಿಸಿದರೆ ತಪ್ಪೇನಿಲ್ಲ. ಈ ತಾಯಿ ತಂದೆಯರು ಕಳಿಸಿದ ಮೇಲೆ ದುಃಖ ಪಡುವುದು ಇಷ್ಟವಿಲ್ಲ. ಕಳಿಸುವಾಗ " ನಮ್ಮ ಮಗ ಅಮೆರಿಕಾ ಗೆ ಹೋಗುತ್ತಿದ್ದಾನೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವುದು. ನಂತರ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಮತ್ತೆ ಸ್ವದೇಶಕ್ಕೆ ಮರಳಲು ಇಚ್ಚಿಸದಿದ್ದರೆ ಆಗ ಬೇಸರ ಮಾಡಿಕೊಳ್ಳುವುದು ಇದೆಲ್ಲ ಸರಿಯಲ್ಲ . ವಯಸ್ಸಾದ ಮೇಲೆ , ಮಗ , ಮಗಳು , ಅವರು, ಇವರು ಈ ಬಂಧನಗಳಿಂದ ದೂರ ಹೋಗಬೇಕು. ಹೀಗೆ... ಭಾಷಣ ಹೊಡೆಯುತ್ತಾ ಹೋದೆ. " ಆದರೆ ಅಪ್ಪ ಅಮ್ಮರನ್ನು    ವೃದ್ಧಾಶ್ರಮಕ್ಕೆ ಸೇರಿಸುವುದು ತಪ್ಪಿಲ್ಲ ತಾನೇ " ಎಂದು ಬಿಟ್ಟಳು. ಈಗ ನಾನು ಸಿಕ್ಕಿ ಬಿದ್ದೆ. ನನ್ನ ದೃಷ್ಟಿಯಲ್ಲಿ  ಈ ವೃದ್ಧಾಶ್ರಮಗಳನ್ನು ಬೆಳೆಯಲು ಬಿಡಬಾರದು. ಇವು ಬೆಳೆಯುವುದರಿಂದ, ಅಪ್ಪ ಅಮ್ಮ ನನ್ನು ಅಲ್ಲಿಗೆ ತಳ್ಳುವುದು ಹೆಚ್ಚಾಗುತ್ತಿದೆ. ಇದು ಬಹುದಿನಗಳಿಂದ ನನ್ನ ಅಭಿಪ್ರಾಯ. ನನ್ನ ಮಗಳ ಮತ್ತೊಂದು ಪ್ರಶ್ನೆ ,  " ನಾನು ಸಣ್ಣ ಮಗುವಿದ್ದಾಗ , ನಿನಗೆ ನೋಡಿಕೊಳ್ಳಲು ಆಗುತ್ತಿಲ್ಲ ಎಂದು  ನನ್ನನ್ನು ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟಿರಲಿಲ್ಲವಾ.   ಈಗ ನಾನು ತಬ್ಬಿಬ್ಬಾದೆ. ಹೌದು, ಮಹಿಳೆಯರು ಸ್ವಾತಂತ್ರ ಬಯಸುತ್ತಾ , ಉದ್ಯೋಗ ಮಾಡುತ್ತಾ  ಮಕ್ಕಳನ್ನು  ಪರರ ಬಳಿ ಬಿಟ್ಟಲ್ಲಿ ಇರದ ತಪ್ಪು ಅವರು ದೊಡ್ಡವರಾಗಿ ನಮ್ಮನ್ನು ಪರರ ಬಳಿ ಬಿಟ್ಟರೇನು ತಪ್ಪು. ಈಗ ಮನು ಸ್ಮೃತಿ ನೆನಪಾಗುತ್ತದೆ. " ಸ್ತ್ರೀಯರಿಗೆ ಸ್ವಾತಂತ್ರ್ಯ ಬೇಡ , ವಿದ್ಯೆ ಬೇಡ " ಅಂದದ್ದು ಇದಕ್ಕೆ ಇರಬಹುದು. ಈ ಪ್ರಶ್ನೆಗೆ ಉತ್ತರ ಸಿಗದೇ " ಬಂದದ್ದೆಲ್ಲಾ ಬರಲಿ ಗೋವಿಂದನ ದಯೆವೊಂದಿರಲಿ" ಎಂದು ಜಪಿಸುವುದನ್ನು ಬಿಟ್ಟು ಇನ್ನೇನೂ ಉಳಿದಿಲ್ಲ. ಜೀವನದಲ್ಲಿ ಅದು ಬೇಕು ಇದು ಬೇಕು ಎಂಬ ಓಟದಲ್ಲಿ  ಹಿಂತಿರುಗಿ ಹೋಗಲಾರದ , ಮುಂದೆ ಸಾಗಲಾಗದ ದಟ್ಟ ಅಡವಿಗೆ ಬಂದು ನಿಂತುಬಿಟ್ಟಿದ್ದೇನೆ. 

Tuesday, January 14, 2020

ಸಂಕ್ರಾಂತಿ

ದಿಕ್ಕು ಬದಲಿಸಿದನಿಂದು ಭಾಸ್ಕರ
 ಬಿಟ್ಟು   ಧನುರಾಶಿಯ ಸೇರುತ   ಮಕರ

ರಥವನೇರಿ  ಸಾಗುತಿಹ  ದಿವ್ಯ ತೇಜದಿ ರವಿ
ಹಾದಿಯುದ್ದಕ್ಕೂ ರಂಗಿನ ರಂಗವಲ್ಲಿಯ ಹರವಿ

ಸುಗ್ಗಿಯ ಕುಣಿತದಿ  ಭಾಗಿಯಾದನಿಂದು ಸೂರ್ಯ
ಹಿಗ್ಗುತ ಮುನ್ನಡೆಯುತಿಹ  ಬೀರುತ  ಸೌಂಧರ್ಯ

ನದಿಗಳಲಿ  ಮಿಂದವರಿಗೆ ಚಂದದಿ  ಕಂಡ ಆದಿತ್ಯ
ಹಳ್ಳಿಯಿಂದ ದಿಲ್ಲಿಯ ನಾಗರಿಕರಿಗಿವನ ಕಾಂತಿ ಅತ್ಯಗತ್ಯ

ಎಳ್ಳು- ಬೆಲ್ಲವ ಬೀರುವರೊಡಗೂಡಿ ದಿವಾಕರ
ಎಲ್ಲರಿಗೆ ಕೃಪೆದೋರಲಿ  ಬಾಂದಳದ ಕರುಣಾಕರ

ಅದೋ ತಿಮಿರವ ನುಂಗಿ  ನಲಿದಿಹ  ಹಿರಣ್ಯಗರ್ಭ
ಮಕರಜ್ಯೋತಿಯ ಸೂಸಿಹ ಸ್ವಾಮಿ   ಶರಣಮಯ್ಯಪ್ಪ

ಮಂದದಿ  ಮುಂದೆ   ಸಾಗಿದ  ಶನಿದೇವರ   ಪಿತ
ಪಾಂಡುರಂಗನ ಪರಮ ಭಕ್ತರಿಗೆ ಅಭಯ ಹಸ್ತವನಿತ್ತ

ಗೂಳಿಗಳ  ಗುದ್ದಾಟಗಳ ನಡುವೆ ವಿವಸ್ವಾನ್
 ಗೋವುಗಳ ಮಿಂಚುಬಳ್ಳಿಗಳಿಂದ ಸಿಂಗರಿಸಿದ ಅಂಶುಮಾನ್

ಸಂಜೆಯ ಸಮಯಕೆ  ತನ್ನ ಸ್ವಸ್ಥಾನಕೆ   ತೆರಳಿದ ಮಿತ್ರಾ
ಸಂಭ್ರಮದಿ ಹರಸಿ, ಸ್ವೀಕರಿಸಿ  ಸಂಕ್ರಾಂತಿಯ ಸಡಗರ

ಎಲ್ಲರಲಿ ಸಂತಸ  ಸ್ಫುರಿಸಿತು   ಸಂಕ್ರಾಂತಿ
ಎಲ್ಲೆಡೆ ಪಸರಿಸಲಿ ಸುಖ   ಶಾಂತಿ







ಸಂಕ್ರಾಂತಿ

ರಂಗೋಲಿ ಬಿಡಿಸಲು
ಮನೆಯ ಮುಂದೆ
ಜಾಗವಿಲ್ಲ

ಗಾಳಿಪಟವ ಹಾರಿಸಲು
ಊರ ಒಳಗೆ
ಮೈದಾನವಿಲ್ಲ

ಗೋವುಗಳ ಸಿಂಗರಿಸಲು
 ದೇಶೀ  ದನಗಳ
ಸುಳಿವಿಲ್ಲ

ಎಳ್ಳು ಬೆಲ್ಲ ಬೀರಲು
ಹೆಣ್ಣುಮಕ್ಕಳು
ಸಿದ್ಧವಿಲ್ಲ

ಪೊಂಗಲ್ ಮಾಡಲು
ಮಹಿಳೆಯರಿಗೆ
ಬರುವುದಿಲ್ಲ

ಸಕ್ಕರೆ ಅಚ್ಚು ಮಾಡುವ
 ಅಜ್ಜಿಯರು 
ಇಂದು ಇಲ್ಲ

ಕಬ್ಬು ಜಗಿಯಲು
ಹಲ್ಲುಗಳಿಗೆ
ಶಕ್ತಿಯಿಲ್ಲ

ಪಿಜ್ಜಾ ಬರ್ಗರ್
 ಸ್ವಿಗೀ  ಜ್ಯೋಮ್ಯಾಟೋಗಳೇ
ಇಲ್ಲೆಲ್ಲಾ

ಬೆಂಗಳೂರಿನಲ್ಲಿ
ಸಂಕ್ರಾಂತಿ ಹಬ್ಬ
ಇಲ್ಲವೇ ಇಲ್ಲ



Monday, January 13, 2020

ಜೆ ಏನ್ ಯು ಹಗರಣ

ಹಲವು ದಿನಗಳಿಂದ ಜೆ ಏನ್ ಯು  ಹಗರಣ ಕೇಳುತ್ತಾ ಬರುತ್ತಿದ್ದೇನೆ. ಇಲ್ಲಿ ತಪ್ಪು ಎಡಪಂತದವರದ್ದಾ , ಬಲಪಂತದವರದ್ದಾ  ಎಂಬ ಚರ್ಚೆ ದೇಶದಾದ್ಯಂತ ನಡೆಯುತ್ತಿದೆ. ನನ್ನ ಮಟ್ಟಿಗೆ ಇಬ್ಬರದೂ ತಪ್ಪಲ್ಲ, ಎರಡು ಸಿದ್ಧಾಂತಗಳ ನಡುವಿನ  ಹೋರಾಟ. ಪ್ರತಿಯೊಬ್ಬ ತನ್ನ ಸಿದ್ಧಾಂತವೇ ಸರಿ ಎಂದು ಮತ್ತೊಂದು ತಪ್ಪು ಎಂದು ವಾದಿಸುತ್ತಾನೆ. ತನ್ನ ಸಿದ್ದಾಂತವನ್ನು ಎಷ್ಟು ಬಲವಾಗಿ ನಂಬಿದ್ದಾನೆಂದರೆ, ಅದನ್ನು ಟೀಕಿಸಿದವನ ತಲೆ ಒಡೆದು ಹಾಕುವಷ್ಟು ಸಿಟ್ಟು. ಇದನ್ನೇ ಗೀತೆಯಲ್ಲಿ (೨. ೬೩) ಶ್ರೀ ಕೃಷ್ಣ ಹೇಳಿರೋದು. "ಕ್ರೋಧಾತ್ ಭವತಿ ಸಮ್ಮೋಹ: . ... ". ಕೋಪದಿಂದ ಮನುಷ್ಯ ಸಂಮೋಹಕ್ಕೊಳಗಾಗುತ್ತಾನೆ, ಸಂಮೋಹದಿಂದ ಸ್ಮೃತಿ ಭ್ರಮೆಯಾಗಿ .. ಅದರಿಂದ ಬುದ್ದಿ ನಾಶವಾಗಿ ಪತನಗೊಳ್ಳುತ್ತಾನೆ.  
ಉದಾಹರಣೆಗೆ , ನಾನು ಸಸ್ಯಾಹಾರಿ, ನನ್ನ  ಗೆಳೆಯ ಮಾಂಸಾಹಾರಿ ಅಂತ ಇಟ್ಟುಕೊಳ್ಳಿ,  ಆಗ ಏನೋ ಪುಳಿಚಾರ್ ಅಂತ  ಅವನು ಹಾಸ್ಯ ಮಾಡಿದ್ರೆ, ಖಂಡಿತ ನನಗೆ ಕೋಪ ಬರುತ್ತದೆ. ಕೆಲವು ವರ್ಷಗಳ  ಹಿಂದೆ ಒಬ್ಬ ಪುಣ್ಯಾತ್ಮ " ನಾನು ದೇವರ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡಿದೆ ನನಗೆ ಏನೂ ಆಗಲಿಲ್ಲ" ಎಂದು ಬಿಟ್ಟ. ಮೂರ್ತಿಯಲ್ಲಿ ದೇವರನ್ನು ಕಾಣುವವರಿಗೆ ಸಿಟ್ಟು ಬಂದು ಆತನನ್ನು ಮುಗಿಸಿಬಿಟ್ಟರು. ಇಲ್ಲಿ ಒಂದು ವಿಷಯ ಚೆನ್ನಾಗಿ ಗಮನಿಸಬೇಕು. ಒಂದು ಸಿದ್ಧಾಂತ ನಮಗೆ  ಇಷ್ಟವಿಲ್ಲದಿದ್ದ ಮಾತ್ರಕ್ಕೆ ಅದನ್ನು ಅಷ್ಟು ಕೀಳಾಗಿ ಕಂಡು ಹೀಯಾಳಿಸುವ ಅಗತ್ಯವಿಲ್ಲ. ನಂಬಲ್ಲ ಅಂದ್ರೆ ಬಿಡು, ಆದ್ರೆ ಅದನ್ನು ಅತಿರೇಕಕ್ಕೆ ತೆಗೆದುಕೊಂಡು  ಹೋಗುವ ಅಗತ್ಯ ಇಲ್ಲ.  ಜೆ.ಏನ್ ಯು ನಲ್ಲಿ ನಡೆದದ್ದು ಇಷ್ಟೇ.. ಟೀಕೆ ಆರೋಪಗಳು ಎಷ್ಟು ಹೆಚ್ಚಿತೆಂದರೆ, ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಏರಿತು. ಈ ಇಬ್ಬರ ಜಗಳ ಮತ್ತೊಬ್ಬರಿಗೆ ಲಾಭವಾಯಿತು. ಅದೇ ಮೀಡಿಯಾ. ಇಬ್ಬರನ್ನು... ತಮ್ಮ ಸ್ಟುಡಿಯೋದಲ್ಲಿ ಕೂರಿಸಿ .. ಇಬ್ಬರನ್ನು ಕೆಣಕಿ, ಜಗಳ ಮಾಡಲು ಬಿಟ್ಟು .. ತಾವು ಆಟ  ನೋಡುತ್ತಾ ಇದ್ದಾರೆ.  
ಇವ್ಯಾವುದಕ್ಕೂ  ವಿಚಲಿತರಾಗದೆ ಇರೋದೇ ಒಳ್ಳೆಯದು. ಕಾದಾಡೋ ಅಷ್ಟು ದಿನ ಕಾದಾಡಲಿ, ಸುಸ್ತಾದಮೇಲೆ ಅವರೇ ಸುಮ್ಮನಾಗ್ತಾರೆ.  Let us not get excited and argue. 

Thursday, January 9, 2020

ಇಂದ್ರಿಯ ಭೋಗ

ಹೊಸ ವರ್ಷವನ್ನು ಸ್ವಾಗತಿಸಲು   ಫೈವ್ ಸ್ಟಾರ್ ಹೋಟೆಲ್ ನಲ್ಲಿ  ಒಂದು ಪಾರ್ಟಿ ಏರ್ಪಾಡಾಗಿತ್ತು.  ರಾಜೇಶ್ ಗೆ ಆ ಪಾರ್ಟಿ ಯಲ್ಲಿ ಭಾಗವಹಿಸಲು ಆಫೀಸಿನಿಂದ  ಎರಡು ಪಾಸ್ ಗಳು ದೊರೆತವು. ಡಿಸಂಬರ್ ೩೧ ರಾತ್ರಿ ತನ್ನ ಹೆಂಡತಿಯನ್ನು ಕರೆದುಕೊಂಡು ಹೋದನು. ಇಬ್ಬರೂ ಪಾರ್ಟಿ ಡ್ರೆಸ್ ಗಳನ್ನು  ಹಾಕಲು ಮರೆಯಲಿಲ್ಲ. ರಾತ್ರಿ ಕುಣಿತ ..ಕುಡಿತ .. ಎಲ್ಲ ಶುರುವಾದವು. ರಾಜೇಶ್  ಉಚಿತವಾಗಿ ದೊರಕಿತೆಂದು ಸ್ವಲ್ಪ ಹೆಚ್ಚಾಗೇ ಕುಡಿದ. ಮಧ್ಯದಲ್ಲಿ ಬರುತ್ತಿದ್ದ ಗೋಬಿ ಮಂಚೂರಿ, ಪನ್ನೀರ್ ಟೀಕಾ  ಇತ್ಯಾದಿಗಳನ್ನು ನಾಲಿಗೆ ಚಪ್ಪರಿಸಿಕೊಳ್ಳುತ್ತ ತಿನ್ನುತ್ತಿದ್ದ. ಸ್ವಲ್ಪ ಹೊತ್ತಿನ ನಂತರ ಶೌಚಾಲಯಕ್ಕೆ ಹೋಗಬೇಕೆನಿಸಿತು,  ಹೋಗುವಾಗ  ದಾರಿಯಲ್ಲಿ ಇಬ್ಬರು ಸರ್ವರ್ ಗಳು ಮರಾಠಿ ಭಾಷೆಯಲ್ಲಿ ಮಾತನಾಡುವುದು ಕೇಳಿಸಿತು. ರಾಜೇಶ್ ಬೆಂಗಳೂರಿಗೆ ಬರುವ ಮುನ್ನ ನಾಗಪುರದಲ್ಲಿ ೩ ವರ್ಷ ಕೆಲಸ ಮಾಡಿದ ಕಾರಣ ಮರಾಠಿ ಅರ್ಥವಾಗುತ್ತಿತ್ತು. ಒಬ್ಬ ಸರ್ವರ್  ಹೇಳಿದ " ಏಯ್ ನಿನ್ನೆದಲ್ಲ.. ಮೊನ್ನೆಯ ಗೋಭಿ  ತೆಗೆದುಕೊಂಡು ಬಾ" ಅಂತ. ಅವರ ಸಂಭಾಷಣೆ ಕೇಳುತ್ತ
ರಾಜೇಶ್ ಗೆ   ಏರಿದ್ದ ಮತ್ತೆಲ್ಲ ಒಮ್ಮೆ ಇಳಿಯಿತು. ಸ್ವಲ್ಪ ಆಲೋಚನೆ ಮಾಡಿ , ಒಮ್ಮೆಗೆ ಹೆಚ್ಚುಮಂದಿ ಅತಿಥಿಗಳು ಬರುತ್ತಾರೆಂದರೆ, ಅದಕ್ಕೆ ಊಟದ ತಯಾರಿ ಎರಡು ದಿನಗಳಿಂದಲೇ ಆಗಿರುತ್ತದೆ. ಕೆಲಸಗಾರರು ಅಷ್ಟೇ ಮಂದಿ, ಅತಿಥಿಗಳು ಹೆಚ್ಚು ಎಂದರೆ, ಆ ಹೋಟೆಲ್ ಮಾಲಿಕ ಏನು ಮಾಡಬೇಕು. ಉಳಿದದ್ದು ಪಳಿದದ್ದೆಲ್ಲ ಸ್ವಲ್ಪ ಬಿಸಿ ಮಾಡಿ, ಕುಡಿದು ಅಮಲೇರಿರುವವರಿಗೆ ಬಡಿಸಿ ತನ್ನ ಜೇಬು ತುಂಬಿಸಿಕೊಳ್ಳುತ್ತಾನೆ. ಎಚ್ಚರವಾದ ರಾಜೇಶ್ ಎಲ್ಲವನ್ನೂ ವಾಂತಿಮಾಡಿಬಿಟ್ಟ.
ಸ್ನೇಹಿತರೆ, ಇಂದ್ರಿಯ ಭೋಗಗಳು ಇದೇ  ರೀತಿಯದ್ದು.. ಕ್ಷಣಿಕ ಸುಖ ಕೊಡುತ್ತದೆ. ಅದರಿಂದ ಹೊರಗೆ ಬರಬೇಕು, ಈ ಭೋಗಗಳ ಬಗ್ಗೆ ಇರುವ ಆಸೆ , ವ್ಯಾಮೋಹಗಳನ್ನು ವಾಂತಿ ಮಾಡಬೇಕು. ಇದನ್ನೇ ಶ್ರೀ ಕೃಷ್ಣ ಗೀತೆಯ ಐದನೇ ಅಧ್ಯಾಯದಲ್ಲಿ ಹೇಳಿರಿವುದು (೫. ೨೨). ಈ ರೀತಿಯ ಇಂದ್ರಿಯ ಸುಖಗಳು ದುಃಖಕ್ಕೆ ಕಾರಣವಾಗುವುದರಿಂದ ವಿವೇಕಿಯಾದವನು  ಇವುಗಳಿಂದ ದೂರವಿರುತ್ತಾನೆ. 
ಹರೇ ಕೃಷ್ಣ
KVR

ಸಂಕಲ್ಪ

ಕಲ್ಕಿಯು  ಹುಟ್ಟಿಬರಲೀ
ಕಲಿಯುಗದಲಿ
ಕಾಮೋದ್ರೇಕದ ಕಂಗಳ
ಕಿತ್ತೆಸೆಯಲಿ
ಕ್ಷಣಿಕ ಮುಂಗೋಪವ
ಕ್ಷೀಣಿಸಲಿ
ಕ್ಷುಲ್ಲಕಗಳನಾಲಿಸುವ  ಕಿವಿಗಳ
ಕತ್ತರಿಸಲಿ
ಕಿಚ್ಚಿನಿಂ ಹೊತ್ತಿಸಿದ ಕಾಳ್ಗಿಚ್ಚ
ನಂದಿಸಲಿ
ಕಾಯದ  ಮೇಲಿನ ವ್ಯಾಮೋಹವ
ಕಡೆಗಾಣಿಸಲಿ
ಕನಕವ ದುರಾಸೆಯಿಂ ಗಳಿಸಿದರದನು
ಕಲ್ಲಾಗಿಸಲಿ
ಮದದಿಂ ಜರಿಯುವ ನಾಲಿಗೆಯ
ತುಂಡರಿಸಲಿ
ಒಟ್ಟಿನಲಿ  ಷಟ್ ವರ್ಗಗಳು ಪಂಚೇದ್ರಿಯಗಳು   ಸೇರಿ
ಏಕಾದಶರಾಗಿ ಆಡುವ ಆಟ ..
ಅವುಗಳ ನಿಯಂತ್ರಿಸುವ ಸೆಣಸಾಟವೇ
ಈ  "ಟ್ವೆಂಟಿ - ಟ್ವೆಂಟಿ "
ಇದ ಜಯಿಸುವ ಸಂಕಲ್ಪದೊಂದಿಗೆ
ಸ್ವಾಗತಿಸೋಣ ಹೊಸ ವರುಷ - ಟ್ವೆಂಟಿ - ಟ್ವೆಂಟಿ

Saturday, January 4, 2020

ಕೃಷ್ಣ

ಕೃಷ್ಣ  ಎಂದರೆ  ಎಲ್ಲರನ್ನು ಆಕರ್ಷಿಸುವವನು. ಭೂಮಿಗೂ ಆಕರ್ಷಣ ಶಕ್ತಿ ಇದೆ. ಭೂಮಿ ಮೇಲಕ್ಕೆ ಹೋದವರನ್ನು ಕೆಳಕ್ಕೆ ಎಳೆಯುತ್ತದೆ. ಕೃಷ್ಣ ಕೆಳಕ್ಕೆ ಬಿದ್ದವರನ್ನು ಮೇಲಕ್ಕೆ ಎತ್ತುತ್ತಾನೆ .
ಪೇಜಾವರ ಶ್ರೀ