Thursday, October 5, 2017

ಹೆಲ್ಮೆಟ್

ಹೆಲ್ಮೆಟ್ 



ಅಂದು ದೇವತೆಗಳು  ಶಿರದ ಮೇಲೆ ಧರಿಸಿದರು ಕಿರೀಟ 
ಇಂದು ಮಾನವರ ತಲೆ ಮೇಲಿದೆ ಅಂಥಹುದೇ ಒಂದು " ಹೆಲ್ಮೆಟ"

ಹಾಕಲಿಲ್ಲವೆಂದು  ಜುಲ್ಮಾನೆ ಕಟ್ಟಿದೆ ವೆಷ್ಟೋ  ಬಾರಿ 
ಹಾಕಿ ಕೊಂಡು ತಲೆ ಭಾರ ಬರಿಸಿಕೊಂಡೆವು ಹಲವು ಬಾರಿ 

ಬೇಗನೆ ಕಿತ್ತುಹೋಗುವ ಇದರ ವಾಯುರೋಧಕ 
ತಲೆಗಲ್ಲ ಕೈಗೆ ಧರಿಸಿ ಓಡಿಸುವ ವಾಹನ ಚಾಲಕ 

ಕೂದಲು ಹಾಳಾಗದಂತೆ ಧರಿಸುವ ಶಿರೋ ವಸ್ತ್ರ 
ಜಗಳಕೆ ಬಂದವನ ಬಾರಿಸಲು ಇದೊಂದು ಅಸ್ತ್ರ 

ಇದ ಮಾರುವವನ ಕಾಣುವೆವು ರಸ್ತೆಗಳ ಬಳಿಯಲ್ಲಿ 
ಇವು ಬಳಕೆಯಾದ ಮೇಲೆ ಬಿದ್ದಿರುತ್ತವೆ ಅಲ್ಲಿ ಇಲ್ಲಿ 

ಶಿರವ ಕಾಪಾಡಿ ಕೊಳ್ಳಲು ಬೇಕು ಹೆಲ್ಮೆಟ್ಟು 
ಇದನು ಜೋಪಾನ ಮಾಡಬೇಕು ಕಷ್ಟ ಪಟ್ಟು 

- ೦ -