ಹೊಸ ವರುಷವು ಬರುತಿದೆ ಹೊಸ ಆಸೆಗಳ ತರುತಿದೆ
ಪ್ರಳಯದ ಭೀತಿ ಇನ್ನಿಲ್ಲ
ಆದರೂ ಅತ್ಯಾಚಾರ, ಅನ್ಯಾಯಗಳು ನಿಲ್ಲುತ್ತಿಲ್ಲ
ಸಮಾಜದ ಸುಧಾರಣೆಯಾಗಬೇಕು
ಎಲ್ಲರ ಮನಗಳ ಮಲಿನ ತೊಲಗಬೇಕು
ವಿವೇಕಾನಂದರ ವಾಣಿ ನೆನೆಯಬೇಕು
ಯುವ ಜನಾಂಗ ಎದ್ದು ನಿಲ್ಲಬೇಕು
ಅತ್ಯಾಚಾರವ ತೊಲಗಿಸಬೇಕು
ಅಹಂಕಾರಿಗಳ ಮದ ಅಡಗಿಸಬೇಕು
ಲಂಚಕೋರರಿಗೆ ಪಾಠ ಕಲಿಸಬೇಕು...........೨೦೧೩ ಕ್ಕೆ ಇಷ್ಟೇ ಸಾಕು.
ಹೊಸವರುಷವು ಎಲ್ಲರಿಗೂ ಸುಖದಾಯಕವಾಗಿರಲಿ.
WISH YOU A VERY HAPPY NEW YEAR
Friday, December 28, 2012
ಸ್ತ್ರೀ ಭ್ರೂಣ ಹತ್ಯೆ
ಭ್ರೂಣ ಹತ್ತ್ಯೆ ಮಾಡಲು ಹೊರಟ ತನ್ನ ತಾಯಿಯನ್ನು ಹೆಣ್ಣು ಮಗುವು ಕೇಳಿತು, "ಅಮ್ಮ ನನ್ನನ್ನೇಕೆ ಕೊಲ್ಲುವೆ?
ನಾನು ಸುಂದರವಾದ ಪ್ರಪಂಚವನ್ನು ನೋಡಬಯಸುತ್ತೇನೆ. ಹೊರಗೆ ಬರಲು ಬಿಡದಿರುವುದು ಏನು ನ್ಯಾಯ?" ಆ ತಾಯಿ ನುಡಿದಳು, " ಮಗುವೇ... ನೀನು ತಿಳಿದಷ್ಟು ಸುಂದರವಾದ ಪ್ರಪಂಚವಲ್ಲ ಇದು. ನೀನು ಏನೇನೋ ಕನಸುಗಳನ್ನು ಹೊತ್ತು ಹೊರಬರಲು ಬಯಸುತ್ತಿರುವೆ. ನಿಜಾಂಶವು ನಿನ್ನ ಆಲೋಚನೆಗಳಿಗೆ ತದ್ವಿರುದ್ಧವಾಗಿದೆ. ನೀನು ಬಂದ ಎರಡೇ ವರ್ಷಕ್ಕೆ ನಿನ್ನನ್ನು ಕೆಟ್ಟ ದೃಷ್ಟಿಯಿಂದ ಕಾಣುವ ಜನರಿದ್ದಾರೆ. ೨, ೩...೫... ಹೀಗೆ ಮಗುವಿನ ವಯಸ್ಸಿನ ಅರಿವೇ ಇಲ್ಲದ ಈ ಜನ ಹೆಣ್ಣು ಮಗುವಾದರೆ ಸಾಕು ನಾನಾ ರೀತಿಯ ಹಿಂಸೆ ಅತ್ಯಾಚಾರವೆಸಗುತ್ತಾರೆ. ಇವೆಲ್ಲಾ ನಿನಗೆ ಬೇಕಾ? ಇನ್ನೂ ದೊಡ್ಡವಳಾದರೆ ಶಾಲೆಯಲ್ಲಿ ಶಿಕ್ಷಕರಿಂದ ಅತ್ಯಾಚಾರ, ಹೊರಗೆ ದಾರಿಗಳಲ್ಲಿ ಪುಂಡರ ಕಾಟ, ಸಿಟಿ ಬಸ್ಸಿನಲ್ಲಿ ನಿನ್ನ ಸ್ಪರ್ಶದಿಂದಲೇ ಮಹದಾನಂದ ಪಡುವ ನಾಚಿಕೆ ಇಲ್ಲದವರ ನಡುವೆ ಬಾಳಲು ಇಚ್ಛಿಸುವೆಯಾ? ಇನ್ನೂ ಬೆಳೆದಂತೆ ಪ್ರೀತಿಯ ಅರಿವೇ ಇಲ್ಲದ ಹುಡುಗ "ನಿನ್ನನ್ನು ಪ್ರೀತಿಸುತ್ತೇನೆ" ಎನ್ನುತ್ತಾನೆ, ಅವನನ್ನು ತಿರಸ್ಕರಿಸಿದರೆ ನಿನ್ನ ಮುಖದ ಮೇಲೆ ಆಸಿಡ್ ಎರಚುತ್ತಾನೆ. ಹೇಳಲು ಹೋದರೆ ದುಷ್ಟರ ಮಹಾಸಾಗರವೇ ಇರುವ ಈ ಜಗತ್ತಿಗೆ ಬರಲು ನಿನಗಾಸೆಯೇ? ಆ ಮಗುವು " ಅಮ್ಮ... ಈಗ ಹೊಸ ತಂತ್ರಜ್ಞಾನಗಳಿವೆಯಂತೆ ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ ಫೋನುಗಳು, ಇನ್ನೂ ಅನೇಕ ವಿಸ್ಮಯಗಳಿವೆಯಂತೆ ...ನಾನು ಬರಲೇಬೇಕಮ್ಮ". ಆ ಮಾತೆ ನುಡಿದಳು "ಅಯ್ಯೋ ದಡ್ಡೀ , ಅವುಗಳಲ್ಲೂ ಅಶ್ಲೀಲತೆ, ಕೆಲವು ಸೈಕೋಪಾತ್ ಗಳು ಮೊಬೈಲ್ ನಿಂದ ಅಸಭ್ಯಕರ ಸಂದೇಶ(ಎಸ್ .ಎಂ.ಎಸ್ )ಗಳನ್ನು ಕಳುಹಿಸಿ ನಿನ್ನ ಮನಸನ್ನು ಘಾಸಿ ಗೊಳಸುತ್ತಾರೆ ". ಮಗುವಿಗೆ ಆ ತಾಯಿಯ ಮಾತು ಹಾಗೂ ನೋವು ಅರ್ಥವಾಯಿತು. ಅದು "ಇಷ್ಟೆಲ್ಲಾ ಕೇಳಿದ ನಂತರ ನನಗೆ ಏನೂ ಬೇಡವೆನಿಸುತ್ತಿದೆ. ನೀನು ಹೇಳುವುದು ನಿಜ.ನನ್ನನ್ನು ಕೊಂದು ಬಿಡು. ಆ ಚಿತ್ರ ಹಿಂಸೆಗಳನ್ನು ಅನುಭವಿಸುವ ಬದಲಿಗೆ ಮೊಳಕೆಯಲ್ಲೇ ಸಾಯಿವುದು ಉಳಿತು" ಎಂದು ಹೇಳಿತು.
ಆ ತಾಯಿಗೆ ಈಗ ಕಾನೂನಿನ ನೆನಪಾಯಿತು "ಇದರಲ್ಲೂ ಕೆಲವು ಸಮಸ್ಯೆಗಳಿವೆ ಕಂದ, ಸ್ತ್ರೀ ಭ್ರೂಣ ಹತ್ಯೆ ಮಹಾ ಪಾಪವಂತೆ, ಕಾನೂನಿನ ಪ್ರಕಾರ ಅಪರಾಧವಂತೆ". ಮಗುವಿಗೂ ಚಿಂತೆಯಾಯಿತು. ಕೋಪದಿಂದ ಕೇಳಿತು " ಇದು ಎಂಥ ಲೋಕವಮ್ಮಾ? ಏನಿಲ್ಲಿನ ಕಾನೂನು? ಹೊರಗೆ ಬಂದ ಮೇಲೆ ನನಗೆ ಯಾವ ರೀತಿಯ ರಕ್ಷಣೆಯೂ ಕೊಡಲಾಗದ ಈ ಕಾನೂನು ನನ್ನನ್ನು ಹೀಗೆ ಕೊಲ್ಲಲು ಏಕೆ ನಿರಾಕರಿಸುತ್ತದೆ. ಅನ್ಯಾಯವಿದು! ಆದರೆ ನನಗೊಂದು ಸಂಶಯ! ನೀನು ಹೇಳಿದ ಲೋಕದಲ್ಲಿ ಸುಂದರವಾದದ್ದು ಏನೂ ಇಲ್ಲವೇ?", ಆ ತಾಯಿಯು ಧೀರ್ಘವಾಗಿ ಆಲೋಚಿಸಿ ಉತ್ತರ ನೀಡಿದಳು. " ಇದೆ ಕಂದ .. ಸುಂದರವಾದ ನೆಲ, ಜಲ, ಕಲಿಯಲು ಒಂದು ಜನ್ಮ ಸಾಲದಷ್ಟು ವಿಷಯಗಳು, ಅತ್ಯದ್ಭುತಗಳು, ಊಹಿಸಲಾರದ ಎಷ್ಟೋ ಸೌಲಭ್ಯಗಳು ಇಲ್ಲಿವೆ. ಅವುಗಳನ್ನು ನಿನಗೆ ತೋರಿಸಬೇಕೆಂಬ ಹಂಬಲವು ನನಗಿದೆ. ಇಲ್ಲಿನ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಶಕ್ತಿ, ಸಾಮರ್ಥ್ಯವು ನಿನಗಿದ್ದರೆ ನಾನೇ ರಕ್ಷಣೆ ಕಲ್ಪಿಸುವ ಮಾರ್ಗವನ್ನು ಹುಡುಕಿಕೊಟ್ಟು ಈ ಸುಂದರವಾದ ಜಗವನ್ನು ನಿನಗೆ ತೋರಿಸುವೆ.
----------------------------------X------------------------------------

Saturday, October 6, 2012
Subscribe to:
Posts (Atom)