Thursday, January 9, 2020

ಸಂಕಲ್ಪ

ಕಲ್ಕಿಯು  ಹುಟ್ಟಿಬರಲೀ
ಕಲಿಯುಗದಲಿ
ಕಾಮೋದ್ರೇಕದ ಕಂಗಳ
ಕಿತ್ತೆಸೆಯಲಿ
ಕ್ಷಣಿಕ ಮುಂಗೋಪವ
ಕ್ಷೀಣಿಸಲಿ
ಕ್ಷುಲ್ಲಕಗಳನಾಲಿಸುವ  ಕಿವಿಗಳ
ಕತ್ತರಿಸಲಿ
ಕಿಚ್ಚಿನಿಂ ಹೊತ್ತಿಸಿದ ಕಾಳ್ಗಿಚ್ಚ
ನಂದಿಸಲಿ
ಕಾಯದ  ಮೇಲಿನ ವ್ಯಾಮೋಹವ
ಕಡೆಗಾಣಿಸಲಿ
ಕನಕವ ದುರಾಸೆಯಿಂ ಗಳಿಸಿದರದನು
ಕಲ್ಲಾಗಿಸಲಿ
ಮದದಿಂ ಜರಿಯುವ ನಾಲಿಗೆಯ
ತುಂಡರಿಸಲಿ
ಒಟ್ಟಿನಲಿ  ಷಟ್ ವರ್ಗಗಳು ಪಂಚೇದ್ರಿಯಗಳು   ಸೇರಿ
ಏಕಾದಶರಾಗಿ ಆಡುವ ಆಟ ..
ಅವುಗಳ ನಿಯಂತ್ರಿಸುವ ಸೆಣಸಾಟವೇ
ಈ  "ಟ್ವೆಂಟಿ - ಟ್ವೆಂಟಿ "
ಇದ ಜಯಿಸುವ ಸಂಕಲ್ಪದೊಂದಿಗೆ
ಸ್ವಾಗತಿಸೋಣ ಹೊಸ ವರುಷ - ಟ್ವೆಂಟಿ - ಟ್ವೆಂಟಿ

No comments:

Post a Comment