ಈ ದಿನ ನನ್ನ ಮಗಳೊಂದಿಗೆ ಮಾತನಾಡುತ್ತಾ ಬರುತ್ತಿದ್ದೆ. ಹೀಗೆ ಒಂದು ಪ್ರಶ್ನೆ ಕೇಳಿದಳು "ಅಮ್ಮ ಒಬ್ಬ ಹುಡುಗ ದೊಡ್ಡವನಾದ ಮೇಲೆ ವಿದೇಶಕ್ಕೆ ಹೋಗಲು ಆಶಿಸಿದರೆ ತಪ್ಪಾ". ಇದಕ್ಕೆ ನನ್ನ ಉತ್ತರ, ಅಪ್ಪ ಅಮ್ಮ ಖುಷಿಯಿಂದ ಕಳಿಸಿದರೆ ತಪ್ಪೇನಿಲ್ಲ. ಈ ತಾಯಿ ತಂದೆಯರು ಕಳಿಸಿದ ಮೇಲೆ ದುಃಖ ಪಡುವುದು ಇಷ್ಟವಿಲ್ಲ. ಕಳಿಸುವಾಗ " ನಮ್ಮ ಮಗ ಅಮೆರಿಕಾ ಗೆ ಹೋಗುತ್ತಿದ್ದಾನೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವುದು. ನಂತರ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಮತ್ತೆ ಸ್ವದೇಶಕ್ಕೆ ಮರಳಲು ಇಚ್ಚಿಸದಿದ್ದರೆ ಆಗ ಬೇಸರ ಮಾಡಿಕೊಳ್ಳುವುದು ಇದೆಲ್ಲ ಸರಿಯಲ್ಲ . ವಯಸ್ಸಾದ ಮೇಲೆ , ಮಗ , ಮಗಳು , ಅವರು, ಇವರು ಈ ಬಂಧನಗಳಿಂದ ದೂರ ಹೋಗಬೇಕು. ಹೀಗೆ... ಭಾಷಣ ಹೊಡೆಯುತ್ತಾ ಹೋದೆ. " ಆದರೆ ಅಪ್ಪ ಅಮ್ಮರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ತಪ್ಪಿಲ್ಲ ತಾನೇ " ಎಂದು ಬಿಟ್ಟಳು. ಈಗ ನಾನು ಸಿಕ್ಕಿ ಬಿದ್ದೆ. ನನ್ನ ದೃಷ್ಟಿಯಲ್ಲಿ ಈ ವೃದ್ಧಾಶ್ರಮಗಳನ್ನು ಬೆಳೆಯಲು ಬಿಡಬಾರದು. ಇವು ಬೆಳೆಯುವುದರಿಂದ, ಅಪ್ಪ ಅಮ್ಮ ನನ್ನು ಅಲ್ಲಿಗೆ ತಳ್ಳುವುದು ಹೆಚ್ಚಾಗುತ್ತಿದೆ. ಇದು ಬಹುದಿನಗಳಿಂದ ನನ್ನ ಅಭಿಪ್ರಾಯ. ನನ್ನ ಮಗಳ ಮತ್ತೊಂದು ಪ್ರಶ್ನೆ , " ನಾನು ಸಣ್ಣ ಮಗುವಿದ್ದಾಗ , ನಿನಗೆ ನೋಡಿಕೊಳ್ಳಲು ಆಗುತ್ತಿಲ್ಲ ಎಂದು ನನ್ನನ್ನು ಬೇಬಿ ಸಿಟ್ಟಿಂಗ್ ನಲ್ಲಿ ಬಿಟ್ಟಿರಲಿಲ್ಲವಾ. ಈಗ ನಾನು ತಬ್ಬಿಬ್ಬಾದೆ. ಹೌದು, ಮಹಿಳೆಯರು ಸ್ವಾತಂತ್ರ ಬಯಸುತ್ತಾ , ಉದ್ಯೋಗ ಮಾಡುತ್ತಾ ಮಕ್ಕಳನ್ನು ಪರರ ಬಳಿ ಬಿಟ್ಟಲ್ಲಿ ಇರದ ತಪ್ಪು ಅವರು ದೊಡ್ಡವರಾಗಿ ನಮ್ಮನ್ನು ಪರರ ಬಳಿ ಬಿಟ್ಟರೇನು ತಪ್ಪು. ಈಗ ಮನು ಸ್ಮೃತಿ ನೆನಪಾಗುತ್ತದೆ. " ಸ್ತ್ರೀಯರಿಗೆ ಸ್ವಾತಂತ್ರ್ಯ ಬೇಡ , ವಿದ್ಯೆ ಬೇಡ " ಅಂದದ್ದು ಇದಕ್ಕೆ ಇರಬಹುದು. ಈ ಪ್ರಶ್ನೆಗೆ ಉತ್ತರ ಸಿಗದೇ " ಬಂದದ್ದೆಲ್ಲಾ ಬರಲಿ ಗೋವಿಂದನ ದಯೆವೊಂದಿರಲಿ" ಎಂದು ಜಪಿಸುವುದನ್ನು ಬಿಟ್ಟು ಇನ್ನೇನೂ ಉಳಿದಿಲ್ಲ. ಜೀವನದಲ್ಲಿ ಅದು ಬೇಕು ಇದು ಬೇಕು ಎಂಬ ಓಟದಲ್ಲಿ ಹಿಂತಿರುಗಿ ಹೋಗಲಾರದ , ಮುಂದೆ ಸಾಗಲಾಗದ ದಟ್ಟ ಅಡವಿಗೆ ಬಂದು ನಿಂತುಬಿಟ್ಟಿದ್ದೇನೆ.
Subscribe to:
Post Comments (Atom)
No comments:
Post a Comment