Monday, January 13, 2020

ಜೆ ಏನ್ ಯು ಹಗರಣ

ಹಲವು ದಿನಗಳಿಂದ ಜೆ ಏನ್ ಯು  ಹಗರಣ ಕೇಳುತ್ತಾ ಬರುತ್ತಿದ್ದೇನೆ. ಇಲ್ಲಿ ತಪ್ಪು ಎಡಪಂತದವರದ್ದಾ , ಬಲಪಂತದವರದ್ದಾ  ಎಂಬ ಚರ್ಚೆ ದೇಶದಾದ್ಯಂತ ನಡೆಯುತ್ತಿದೆ. ನನ್ನ ಮಟ್ಟಿಗೆ ಇಬ್ಬರದೂ ತಪ್ಪಲ್ಲ, ಎರಡು ಸಿದ್ಧಾಂತಗಳ ನಡುವಿನ  ಹೋರಾಟ. ಪ್ರತಿಯೊಬ್ಬ ತನ್ನ ಸಿದ್ಧಾಂತವೇ ಸರಿ ಎಂದು ಮತ್ತೊಂದು ತಪ್ಪು ಎಂದು ವಾದಿಸುತ್ತಾನೆ. ತನ್ನ ಸಿದ್ದಾಂತವನ್ನು ಎಷ್ಟು ಬಲವಾಗಿ ನಂಬಿದ್ದಾನೆಂದರೆ, ಅದನ್ನು ಟೀಕಿಸಿದವನ ತಲೆ ಒಡೆದು ಹಾಕುವಷ್ಟು ಸಿಟ್ಟು. ಇದನ್ನೇ ಗೀತೆಯಲ್ಲಿ (೨. ೬೩) ಶ್ರೀ ಕೃಷ್ಣ ಹೇಳಿರೋದು. "ಕ್ರೋಧಾತ್ ಭವತಿ ಸಮ್ಮೋಹ: . ... ". ಕೋಪದಿಂದ ಮನುಷ್ಯ ಸಂಮೋಹಕ್ಕೊಳಗಾಗುತ್ತಾನೆ, ಸಂಮೋಹದಿಂದ ಸ್ಮೃತಿ ಭ್ರಮೆಯಾಗಿ .. ಅದರಿಂದ ಬುದ್ದಿ ನಾಶವಾಗಿ ಪತನಗೊಳ್ಳುತ್ತಾನೆ.  
ಉದಾಹರಣೆಗೆ , ನಾನು ಸಸ್ಯಾಹಾರಿ, ನನ್ನ  ಗೆಳೆಯ ಮಾಂಸಾಹಾರಿ ಅಂತ ಇಟ್ಟುಕೊಳ್ಳಿ,  ಆಗ ಏನೋ ಪುಳಿಚಾರ್ ಅಂತ  ಅವನು ಹಾಸ್ಯ ಮಾಡಿದ್ರೆ, ಖಂಡಿತ ನನಗೆ ಕೋಪ ಬರುತ್ತದೆ. ಕೆಲವು ವರ್ಷಗಳ  ಹಿಂದೆ ಒಬ್ಬ ಪುಣ್ಯಾತ್ಮ " ನಾನು ದೇವರ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡಿದೆ ನನಗೆ ಏನೂ ಆಗಲಿಲ್ಲ" ಎಂದು ಬಿಟ್ಟ. ಮೂರ್ತಿಯಲ್ಲಿ ದೇವರನ್ನು ಕಾಣುವವರಿಗೆ ಸಿಟ್ಟು ಬಂದು ಆತನನ್ನು ಮುಗಿಸಿಬಿಟ್ಟರು. ಇಲ್ಲಿ ಒಂದು ವಿಷಯ ಚೆನ್ನಾಗಿ ಗಮನಿಸಬೇಕು. ಒಂದು ಸಿದ್ಧಾಂತ ನಮಗೆ  ಇಷ್ಟವಿಲ್ಲದಿದ್ದ ಮಾತ್ರಕ್ಕೆ ಅದನ್ನು ಅಷ್ಟು ಕೀಳಾಗಿ ಕಂಡು ಹೀಯಾಳಿಸುವ ಅಗತ್ಯವಿಲ್ಲ. ನಂಬಲ್ಲ ಅಂದ್ರೆ ಬಿಡು, ಆದ್ರೆ ಅದನ್ನು ಅತಿರೇಕಕ್ಕೆ ತೆಗೆದುಕೊಂಡು  ಹೋಗುವ ಅಗತ್ಯ ಇಲ್ಲ.  ಜೆ.ಏನ್ ಯು ನಲ್ಲಿ ನಡೆದದ್ದು ಇಷ್ಟೇ.. ಟೀಕೆ ಆರೋಪಗಳು ಎಷ್ಟು ಹೆಚ್ಚಿತೆಂದರೆ, ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಏರಿತು. ಈ ಇಬ್ಬರ ಜಗಳ ಮತ್ತೊಬ್ಬರಿಗೆ ಲಾಭವಾಯಿತು. ಅದೇ ಮೀಡಿಯಾ. ಇಬ್ಬರನ್ನು... ತಮ್ಮ ಸ್ಟುಡಿಯೋದಲ್ಲಿ ಕೂರಿಸಿ .. ಇಬ್ಬರನ್ನು ಕೆಣಕಿ, ಜಗಳ ಮಾಡಲು ಬಿಟ್ಟು .. ತಾವು ಆಟ  ನೋಡುತ್ತಾ ಇದ್ದಾರೆ.  
ಇವ್ಯಾವುದಕ್ಕೂ  ವಿಚಲಿತರಾಗದೆ ಇರೋದೇ ಒಳ್ಳೆಯದು. ಕಾದಾಡೋ ಅಷ್ಟು ದಿನ ಕಾದಾಡಲಿ, ಸುಸ್ತಾದಮೇಲೆ ಅವರೇ ಸುಮ್ಮನಾಗ್ತಾರೆ.  Let us not get excited and argue. 

No comments:

Post a Comment