ಇದೇ ತಿಂಗಳ ೨೩ ರಂದು ಕರಾಚಿಯಲ್ಲಿ ನಡೆದ ದುರ್ಘಟನೆ ಜಗತ್ತಿನಾದ್ಯಂತದ ನಾಗರಿಕ ವಿಮಾನಯಾನಕ್ಕೆ ಎಚ್ಚರಿಸುವಂತಿದೆ. ಆದದ್ದೇನೆಂದರೆ, ಶುಕ್ರವಾರ ಲಾಹೋರ್ ನಿಂದ ಕರಾಚಿಗೆ ಸುಮಾರು ೯೯ ನಾಗರಿಕರನ್ನು ಹೊತ್ತು ಹೋರಟ ಏರ್ ಬಸ್ A 320 ವಿಮಾನ ಕರಾಚಿಯ ಬಳಿ ನೆಲಕ್ಕುರುಳಿ ಹಲವರ ಜೀವವನ್ನು ಬಲಿ ತೆಗೆದುಕೊಂಡಿದೆ. ಹಾರಾಟದ ಸಮಯದಲ್ಲಿ ಎರಡೂ ಎಂಜಿನ್ ಗಳ ವೈಫಲ್ಯದಿಂದ ಈ ದುರಂತ ಸಂಭವಿಸಿದೆ ಎಂದು ಮಾಹಿತಿ ದೊರೆತಿದೆ. ಈ ಘಟನೆ ೧೯೯೬ ಫೆಬ್ರವರಿ ಆರರಂದು ನಡೆದ ಇನ್ನೊಂದು ವಿಮಾನ ಅಪಘಾತದ ನೆನಪು ತರುತ್ತದೆ. ಅದು ಬರ್ಗೆನೇರ್ ವಿಮಾನ ೩೦೧. ೧೮೯ ನಾಗರಿಕರನ್ನು ಹೊತ್ತ ವಿಮಾನ ತಾಂತ್ರಿಕ ದೋಷದಿಂದ ಅಟ್ಲಾಂಟಿಕ್ ಮಹಾ ಸಾಗರಕ್ಕೆ ಅಪ್ಪಳಿಸಿತು. ಈ ವಿಮಾನವು ಸುಮಾರು ೨೦ ದಿನಗಳ ಕಾಲ ಬಳಕೆಯಲ್ಲಿರಲಿಲ್ಲ. ವಾಯುವೇಗವನ್ನು ಅಳೆಯುವ ಉಪಕರಣ (pitot tube) ದೊಳಗೆ ಒಂದು ಕೀಟ ಗೂಡು (wast nest) ಕಟ್ಟಿತ್ತು. ವಿಮಾನದ ಹಾರಾಟದಲ್ಲಿ ಪೈಲಟ್ ಗಳಿಗೆ ವಾಯು ವೇಗದ ತಪ್ಪು ಮಾಹಿತಿಯನ್ನು ರವಾನಿಸುತ್ತಿತ್ತು. ನುರಿತ ಪೈಲಟ್ ಗಳಿಗೂ ನಿಯಂತ್ರಣ ಮಾಡಲಾಗಲಿಲ್ಲ. ವಿಮಾನ ನಿರ್ವಹಣಾ ತಂಡದಿಂದ ಉಂಟಾದ ಸಣ್ಣ ಪ್ರಮಾದ ದಿಂದ ಈ ದುರಂತ ಸಂಭವಿಸಿತು.
ಕೊರೊನಾ ಲಾಕ್ ಡೌನ್ ನಿಂದ ಹಲವಾರು ವಿಮಾನಗಳು ಬಳಕೆಯಾಗದೆ ನಿಂತಿವೆ . ಹಾರಾಟದ ಮುನ್ನ ಅತ್ಯಂತ ಹೆಚ್ಚಿನ ಮುಂಜಾಗರೂಕತೆ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ.
Recent news on Karachi Air Crash due to engine failure warns the whole civil aviation community in the world. This incident reminds me Birgenair Flight 301 which crashed on Feb 6th, 1996. The reason behind the crash was, the aircraft was not in use for 20 days. There was an error from a pitot tube which was reading wrong air speed. After investigation, they found that there was wasp nest built inside the pitot tube. A small maintenance error caused huge loss. All 189 passengers travelling were dead. After this incident, they started to close the exposed pitot tube by a cap when the aircraft is not in use. Removal of that cap before flight was another challenge.
Now, due to corona lock down, many aircraft are not in use and it requires necessary measures to avoid such accidents.
No comments:
Post a Comment