ರಾಜೇಶ್ ಅಂದು ತಾನು ಹೊಸದಾಗಿ ಕೊಂಡಿದ್ದ ಐ- ಫೋನನ್ನು ಎಲ್ಲರಿಗೂ ತೋರಿಸುತ್ತ ಇದ್ದ, ಅದರಲ್ಲಿದ್ದ ಹೊಸ ವೈಶಿಷ್ಟ್ಯತೆ ಗಳ ಬಗ್ಗೆ ವರ್ಣಿಸುತ್ತಿದ್ದ. ನಾನು ಕಾತುರನಾಗಿ ಎಲ್ಲವನ್ನು ನೋಡಿದೆ, ನನಗೆ ಬಂದ ಅನುಮಾನಗಳನ್ನು ಬಗೆಹರಿಸಿಕೊಂಡೆ. ಅದರ ದರ ಎಷ್ಟು ಎಂದು ಕೇಳಿದ್ದಕ್ಕೆ ೯೫, ೦೦೦ ಅಂತ ಹೇಳಿದ. ಅದನ್ನು ಕೇಳಿ ನಾನು ಸುಸ್ತಾದೆ. ಈ ಪ್ರದರ್ಶನ, ಪ್ರಶ್ನೋತ್ತರ ಕಾರ್ಯಕ್ರಮಗಳು ಮುಗಿದಮೇಲೆ ಎಲ್ಲರೂ ನಮ್ಮ ನಮ್ಮ ಕೆಲಸದಲ್ಲಿ ನಿರತರಾದೆವು. ಊಟದ ಸಮಯದಲ್ಲಿ , ಸುನಿಲ್ ಜೊತೆ ಮಾತನಾಡುವಾಗ ನಾನು ಸ್ವಲ್ಪ ಹೆಚ್ಚಾಗೇ ಬೆಳಗ್ಗೆ ರಾಜೇಶ್ ತನ್ನ ಫೋನ್ ಬಗ್ಗೆ ಬಡಾಯಿ ಕೊಚ್ಚಿಕೊಂಡದ್ದನ್ನು ಹೇಳಿದೆ. ಆ ದಿನದ ವರೆಗೆ ನನಗೆ ಐ ಫೋನ್ ಹೇಗಿರುತ್ತದೆ ಎಂದು ಗೊತ್ತಿರಲಿಲ್ಲ. ಅಷ್ಟರಲ್ಲಿ ಸುನೀಲ್ ನ ಫೋನ್ ರಿಂಗ್ ಆಯಿತು, ಆತ ತನ್ನ ಜೇಬಿನಿಂದ ಫೋನ್ ತೆಗೆದು ಮಾತನಾಡಿ ಪುನಃ ಜೇಬಿನಲ್ಲಿರಿಸಿದ. ಆಗ ಗಮನಿಸಿದೆ, ಅದು ಐ ಫೋನ್. " ಏ ಸುನಿಲ್ ನಿನ್ನ ಹತ್ರ ಐ ಫೋನ್ ಇರೋ ವಿಷಯ ಹೇಳಲೇ ಇಲ್ಲ" ಅಂದೇ. ಅದಕ್ಕವನು , "ಅದರಲ್ಲೇನಿದೆ, ಇದು ನನ್ನ ಅಣ್ಣ ಉಡುಗೊರೆಯಾಗಿ ಕೊಟ್ಟದ್ದು... ಈದಿನ ಇರುತ್ತೆ... ನಾಳೆ ಹೊಸ ಮಾಡೆಲ್ ಬಂದ ಮೇಲೆ ಇದು ಹೋಗತ್ತೆ... ಇದೆಲ್ಲ ಅಷ್ಟು ಮುಖ್ಯ ಅಲ್ಲ, ಬರುತ್ತೆ ಹೋಗುತ್ತೆ, ಅದಕ್ಕೆ ನಾನು ಅಷ್ಟೊಂದು ಪ್ರಾಮುಖ್ಯತೆ ಕೊಡಲಿಲ್ಲ" ಎಂದ. ಆತ ಎಷ್ಟು ಸರಳವಾಗಿ ಇದ್ದ ಅಂದ್ರೆ, ನಾನು ತುಂಬ ಸಲ ಗಮನಿಸಿದ್ದೇನೆ, ಬಾಸ್ ಏನಾದ್ರೂ ಬೈದ್ರೆ, ನಾವೆಲ್ಲಾ ಆ ಬಾಸ್ ಗೆ ಶಾಪ ಹಾಕಿ ಎರಡು ಮೂರು ದಿನ ಆ ಘಟನೆಯನ್ನೇ ಮತ್ತೆ ಮತ್ತೆ ಆಲೋಚನೆ ಮಾಡ್ತೀವಿ . ಆದ್ರೆ ಈ ಪುಣ್ಯಾತ್ಮ ಬಾಸ್ ಹೊಗಳಿದ್ರೂ ಒಂದೇ ಥರ ಇರ್ತಾನೆ ತೆಗಳಿದ್ರೂ ಒಂದೇ ಥರ ಇರ್ತಾನೆ, ನನಗೆ ನೆನಪು ಆಗೋದು ಧೋನಿ ವರ್ಲ್ಡ್ ಕಪ್ ವಿನ್ ಆದಾಗ ಎಷ್ಟು ಶಾಂತವಾಗಿದ್ದ ಅದೇ ಗಾಂಗೂಲಿ ೨೦೦೨ ರ ಇಂಗ್ಲಾಂಡ್ ಮೇಲೆ ಸರಣಿ ಪಂದ್ಯ ಗೆದ್ದಾಗ ಅಂಗಿಯನ್ನು ಬಿಚ್ಚಿ ಕುಣಿದಾಡಿದ. ಸುಖ ಬಂದಾಗ ಹಿಗ್ಗದೇ ದುಃಖ ಬಂದಾಗ ಕುಗ್ಗದೆ ಇರುವವನೇ ನಿಜವಾದ ಮಾನವ.
ಇಂದು ಅಪ್ಪ ಅಮ್ಮ ಸ್ವಲ್ಪ ಬೈದ್ರೆ, ಮಕ್ಕಳು ಬೇಜಾರು ಮಾಡಿಕೊಳ್ತಾರೆ. ಟೀಚರ್ ಬೈದ್ರೆ , ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದ್ರೆ ಖಿನ್ನತೆಗೆ ಒಳಗಾಗ್ತಾರೆ. ಕೆಲಸ ಹೋಯಿತು ಎಂದ್ರೆ ಮೂರನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದು ಕೊಳ್ಳುತ್ತಾರೆ. ಪ್ರೀತಿಸಿದ ಹುಡುಗಿ ಬೇರೆಯವನ ಜೊತೆ ಹೋದ್ಲು.. ಖಿನ್ನತೆ.
ಇದನ್ನೇ ಗೀತೆ ೫. ೨೦ ನಲ್ಲಿ ಹೇಳೋದು. ಅತ್ಯಂತ ಪ್ರಿಯವಾದದ್ದು ಸಿಕ್ಕಾಗ ಹರ್ಷಿಸುವುದು, ಅದನ್ನು ಕಳೆದುಕೊಂಡಾಗ ದುಃಖಿಸುವುದು ಇವೆರಡನ್ನೂ ಯಾರು ಮಾಡುವುದಿಲ್ಲವೋ ಅವನು ಆಧ್ಯಾತ್ಮಿಕ ನೆಲೆಯನ್ನು ಹೊಂದುತ್ತಾನೆ. ಇಂದು ನಮಗೆ ಹಾಗೂ ನಮ್ಮ ಮಕ್ಕಳಿಗೆ ಇದರ ಅವಶ್ಯಕತೆ ಬಹಳ ಇದೆ. ಒಮ್ಮೆ ಆಲೋಚಿಸಿ ೯೫ ೦೦೦ ಕೊಟ್ಟು ತಂದ ಫೋನ್ ಎರಡನೇ ದಿನಕ್ಕೆ ಕಳುವಾದಾಗ ಅವನಿಗೆ ಎಷ್ಟು ನೋವಾಗುತ್ತದೆ. ಯಾವಾಗ್ಲೂ " ಇದಂ ನ ಮಮ - ಇದು ನನ್ನದಲ್ಲ " ಎಂದು ಇರಬೇಕು. ಕಮಲದ ಎಲೆಯಮೇಲೆರುವ ನೀರಿನಂತೆ ನಾವು ಈ ಜೀವನದಲ್ಲಿ ಇರಬೇಕು.
ಹರೇ ಕೃಷ್ಣ
ಕವಿತಾ ವಿ ರಾವ್

No comments:
Post a Comment