ಬಹಳ ದಿನದ ನಿರೀಕ್ಷೆಯಂತೆ "ಅವನೇ ಶ್ರೀಮನ್ನಾರಾಯಣ" ಬಿಡುಗಡೆ ಯಾಯಿತು. ಮೊದಲನೆ ದಿನ ಸಿನಿಮಾ ನೋಡೋದು ಅದೊಂಥರಾ ಮಜಾ. ಹೀರೊ ಎಂಟರ್ ಆಗುವಾಗ ಶಿಳ್ಳೆ ಹೊಡಿಯೋದು ಇನ್ನೊಂದು ಮಜಾ. ರಕ್ಷಿತ್ ಶೆಟ್ಟಿ ಎಂಟ್ರಿ ವಿಭಿನ್ನವಾಗಿದೆ. ಅಣ್ಣಾವ್ರ " ಭಕ್ತ ಪ್ರಹ್ಲಾದ ಸಿನಿಮಾ... , " ಇಲ್ಲಿದ್ದಾನಾ ನಿನ್ನ ಶ್ರೀ ಹರಿ" ಎಂದು ಕಂಬವ ಒಡೆಯುವಾಗ ರಕ್ಷಿತ್ ಶೆಟ್ಟಿ ಎಂಟ್ರಿ . ಮೊದಲನೇ ಹಾಡಿನ ನೃತ್ಯದ ಸ್ಟೆಪ್ಸ್ ಈಗಾಗಲೇ ವೈರಲ್ ಆಗಿವೆ. ಹಾಸ್ಯದಿಂದ ಕೂಡಿದ ಕುತೂಹಲಕಾರಿ ದೃಶ್ಯಗಳು. ಕಳೆದು ಹೋದ ನಿಧಿಯನ್ನು ಹುಡುಕುವ ಪ್ರಯತ್ನ. ಮೊದಲರ್ಧದಲ್ಲಿ ಕತೆಯಲ್ಲಿ ಅನೇಕ ತಿರುವುಗಳು. ಪುರಾಣದ ಕತೆ ನಾಟಕವಾಗಿ ನೋಡೋದು ಈಗ ವಿರಳವಾಗಿರೋದರಿಂದ ಅದು ಒಂದು ಹೊಸ ಅನುಭವ. " ರಾಮ ರಾಮ...... ಜಾರಿಪಾ" ಎಂಬ ನಾಟಕದ ಡೈಲಾಗ್ ನಿಂದ ನಿಧಿಯ ನಕ್ಷೆ ಬೇಧಿಸುವುದು ಅಧ್ಭುತ .
ಮಧ್ಯಂತರದ ನಂತರ ಕತೆ ಸ್ವಲ್ಪ ನಿಧಾನ ಗತಿ. ಅಚ್ಚ ಕನ್ನಡದ ಡೈಲಾಗ್ ಗಳು, ಮಧ್ಯದಲ್ಲಿ ಯೋಗ್ ರಾಜ್ ಭಟ್ ಬಂದಾಗ, ರಿಷಬ್ ಶೆಟ್ಟಿ ಬಂದಾಗ ಶಿಳ್ಳೆ. ಕಿರಿಕ್ ಪಾರ್ಟಿ ನೋಡಿ ರಕ್ಷಿತ್ ಶೆಟ್ಟಿ ಅಭಿಮಾನಿಗಳಾದ ನಮಗೆ ಅವನ ದಕ್ಷಿಣ ಕನ್ನಡದ ಸೊಗಡು, ಹುಲಿ ವೇಷ, ಇತ್ಯಾದಿ ಈ ಸಿನೆಮಾ ದಲ್ಲಿ ಸಿಗಲಿಲ್ಲ. ಕಡೇ ಕಡೆಗೆ ಸ್ವಲ್ಪ ಜಾಸ್ತಿ ಕತೆ ಎಳೆದು ಕೊಂಡು ಹೋಯ್ತು ಅನಿಸುತ್ತೆ. ಅನವಶ್ಶಕವಾದ ಫಿಟ್ ಸೀನ್ಸ್. ಕಡೆಗೆ "ಒಳಗಿರುವ ನಾರಾಯಣನನ್ನ ಎಬ್ಬಿಸಿದೆ" ಎನ್ನುವ ಪಂಚ್ ಲೈನ್ ತನ್ನ ಶಕ್ತಿ ಕಳೆದುಕೊಂಡಿದೆ.
ಒಟ್ಟಾರೆ. .. ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಮನೋರಂಜನೆಯ ರಸದೌತಣ , ಹೆಚ್ಚು ನಿರೀಕ್ಷೆ ಮಾಡಿದವರಿಗೆ ಸ್ವಲ್ಪ ನಿರಾಸೆ.
೭.೫/೧೦ ರೇಟಿಂಗ್ ಕೊಡಬಹುದು.

No comments:
Post a Comment