ಡಾ. ಎಸ್ ಪ್ರಸಾದ್ ಅವರು ಬರೆದ ಕನ್ನಡ ಸಾಹಿತ್ಯ ಪರಂಪರೆಯನ್ನು ಓದುತ್ತಿದ್ದೆ. ವಚನ ಸಾಹಿತ್ಯವನ್ನು ಓದುವಾಗ ಮನಸ್ಸು ಏಕೋ ತುಂಬಾ ಕಸಿ ವಿಸಿ. ೧೨- ೧೩ ನೆಯ ಶತಮಾನದಲ್ಲೇ ಜನರು ವೈದಿಕ ಪದ್ಧತಿಯ ಬಗ್ಗೆ ರೋಸಿ ಹೋಗಿದ್ದರು. ಆಚಾರ, ಧರ್ಮ, ದೇವರು ಇತ್ಯಾದಿಗಳ ಹೆಸರಲ್ಲಿ ಆಗುತ್ತಿದ್ದ ಅನಾಚಾರಗಳಿಗೆ ಮನನೊಂದಿದ್ದರು. ಹೆಣ್ಣಿಗೆ ಸ್ವಾತಂತ್ರ್ಯವಿಲ್ಲ,ದೇವತಾ ಯಾಗಗಳಲ್ಲಿ ಹಿಂಸೆ, ಹೊಲೆಯರನ್ನು ಹೊರಗಿಟ್ಟ ರೀತಿ ...ಇವುಗಳೆಲ್ಲ ಅವರ ಮನಸಿಗೆ ನೋವುಂಟು ಮಾಡಿತ್ತು. ಕುವೆಂಪು ಅವರು ವೈದಿಕ ಪದ್ದತಿಯನ್ನು ಅಲ್ಲಗಳೆಯುವುದ ಕಂಡು ಪಾಶ್ಚಾತ್ಯದ ಪ್ರಭಾವ ಎಂದುಕೊಂಡಿದ್ದೆ. ಆದರೆ ೧೨ ನೆಯ ಶತಮಾನದ ವಚನಕಾರರು ನಿಂದಿಸುವುದ ಕಂಡರೆ ಸಂದೇಹಗಳು ಹೆಚ್ಚಾಗತೊಡಗಿದವು. ಇದಕ್ಕೆ ನಾನು ಕಂಡುಕೊಂಡ ಉತ್ತರ ಇಷ್ಟೇ ... " ಅತಿ ಆದರೆ ಅಮೃತವು ವಿಷ". ಎರಡು ಪುಸ್ತಕ , ನಾಲ್ಕು ವಚನಗಳನ್ನು ಓದಿ ಸಮಾಜವನ್ನು ವಿಮರ್ಶಿಸುವಷ್ಟು ದೊಡ್ಡವಳಲ್ಲ. ಅತಿ ಸಣ್ಣ ತಲೆಯಲ್ಲಿ ಹೊಳೆದದ್ದು ಇದು... ಬಹುಶಃ ವೈದಿಕ ಪದ್ದತಿಗಳ ದುರುಪಯೋಗವಾಗಿರಬಹುದು. ನಮ್ಮ ಪುರಾತನ ವೈದಿಕ ಪದ್ಧತಿ ಏನಿದೆ... ಅದು ಹಲವು ಋಷಿ ಮುನಿಗಳ ತಪಸ್ಸಿನ ಹಾಗೂ ಅನುಭವದ ಫಲ. ಕಾಲಕ್ರಮೇಣ ಅವು ದುರುಪಯೋಗವಾಗಿ.. ಹೇಳಿದ್ದು ಏನೋ ...ಮಾಡುವುದು ಇನ್ನೇನೋ ಆಗಿರಬೇಕು. ಉದಾಹರಣೆಗೆ ಇಂದಿನ ಒಂದು ವ್ಯವಸ್ಥೆಯನ್ನು ತೆಗೆದುಕೊಳ್ಳಿ, ಒಂದು ಕಚೇರಿಯಲ್ಲಿ, ಮೇಲಿನ ಅಧಿಕಾರಿ, ಆತನ ಕೆಳಗೆ ಕೆಲಸ ಮಾಡುವ ಅಧಿಕಾರಿಗಳು, ಕಡೆಯಲ್ಲಿ ಪ್ಯೂನ್ . ಮೇಲಧಿಕಾರಿಗೆ ಜವಾಬ್ದಾರಿ ಹೆಚ್ಚು, ಪ್ಯೂನ್ ನ ಜವಾಬ್ದಾರಿ ಕಡಿಮೆ ( ಇದು ನಮ್ಮ ವರ್ಣ ವ್ಯವಸ್ಥೆಗೆ ಹತ್ತಿರವಾದದ್ದು). ಈ ವ್ಯವಸ್ಥೆ .. ಆ ಕಚೇರಿಯ ಕಾರ್ಯಗಳು ಸುಗಮವಾಗಿ ನಿರ್ವಹಿಸಲು ಮಾಡಿದಂಥದ್ದು. ಅದು ಸರಿಯಾಗಿ ನಡೆದರೆ ಎಲ್ಲರಿಗೂ ಆತ್ಮ ತೃಪ್ತಿ , ದುರುಪಯೋಗವಾದರೆ ಅಲ್ಲೋಲ ಕಲ್ಲೋಲದ ಸೃಷ್ಟಿ. ಪ್ಯೂನ್ ಕೈಯಲ್ಲಿ ಮೇಲಧಿಕಾರಿ ತನ್ನ ವೈಯುಕ್ತಿಕ ಕಾರ್ಯಗಳನ್ನು ಮಾಡಿಸಿಕೊಂಡರೆ, ಮನೆಗೆ ತರಕಾರಿ ತರಿಸುವುದೋ ಇನ್ನಿತರ ಕೆಲಸಗಳನ್ನು ಮಾಡಿಸಿಕೊಂಡರೆ... ಒಬ್ಬ ಅಧಿಕಾರಿ ಲಂಚ ತೆಗೆದುಕೊಂಡು ಕೆಲಸ ಮಾಡಿದರೆ ... ಆಗ ತಪ್ಪು ವ್ಯವಸ್ಥೆಯದಲ್ಲ , ಅದನ್ನು ದುರುಪಯೋಗ ಮಾಡಿಕೊಂಡವರದು.
ಹೀಗೆ ಅನೇಕ ಉದಾಹರಣೆ ಗಳನ್ನು ನೋಡಬಹುದು. ವರದಕ್ಷಣೆ ವಿರುದ್ಧ ಕಾಯಿದೇ .. ಅದು ಈಗ ಎಷ್ಟು ದುರುಪಯೋಗವಾಗುತ್ತಿದೆ. ನಿಜವಾಗಿ ನೋವನ್ನು ಅನುಭವಿಸುತ್ತಿರುವ ಹೆಣ್ಣು ಮಕ್ಕಳು ಮೌನವಾಗಿದ್ದಾರೆ. ಈ ಕಾಯಿದೆಯ ಹೆಸರಲ್ಲಿ ಗಂಡನನ್ನು ಹೆದರಿಸುವ, ಅತ್ತೆ ಮಾವಂದಿರನ್ನು ಜೈಲಿಗೆ ತಳ್ಳಿರುವ ಪ್ರಕರಣಗಳು ಎಷ್ಟು ನೋಡುತ್ತಿಲ್ಲ. ಇನ್ನೊಂದು ... ಮೀಸಲಾತಿ ಕಾಯಿದೆ, ನಿಜವಾಗಿಯೂ ಮೀಸಲಾತಿಯ ಫಲಾನುಭವಿಗಳಿಗೆ ಇದು ದೊರೆಯುತ್ತಿಲ್ಲ. ಅಪ್ಪ ಕಷ್ಟ ಪಟ್ಟು ಓದಿ ಮೇಲಕ್ಕೆ ಬಂದರೆ, ಮಗ ನನಗೆ ಮೀಸಲಾತಿಯಲ್ಲಿ ಸೀಟು ಸಿಗುತ್ತದೆ ಎಂದು ಪೋಕರಿ ತಿರುಗುವ ಮಕ್ಕಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ.
ಇವೆಲ್ಲದರಿಂದ ತಿಳಿಯಿವುದು ಒಂದೇ... ವ್ಯವಸ್ಥೆ ತಪ್ಪಲ್ಲ .. ಅದರ ದುರುಪಯೋಗ ತಪ್ಪು.
ನಮ್ಮ ಋಷಿ ಮುನಿಗಳು ಹೆಣ್ಣು ಮಾಯೆ ಹೊನ್ನು ಮಾಯೆ ಎಂದರು. ಸರಿಯಾಗಿಯೇ ಹೇಳಿದ್ದಾರೆ, ಹೆಣ್ಣಿನ ಹಿಂದೆ ಹೋಗಿ ತನ್ನ ನಿಜವಾದ ಕಾಯಕವನ್ನೇ ಮರೆತರೆ ಅವನು ಮೂರ್ಖ. ಹೊನ್ನು... "ಅಂದು ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದು ಸಿದ್ಧಾರ್ಥ ಜಗತ್ತಿಗೆ ಬೋಧಿಸಿದ , ಇಂದು ಅದನ್ನು ವಾಸ್ತವಿಕವಾಗಿ ಸಾಬೀತುಪಡಿಸಿದ ಸಿದ್ಧಾರ್ಥ(ಹೆಗ್ಗಡೆ)". ಸಾಲ ಮಾಡಿ ತುಪ್ಪ ತಿನ್ನು ಅಂದ ಚಾರ್ವಾಕ, ಸಾಲದ ಬಾಧೆಯಿಂದ ನೇಣಿಗೆ ಶರಣಾಗುತ್ತಿದ್ದಾನೆ ಇಂದಿನ ಯುವಕ.
ವಚನಕಾರರು ಹೆಣ್ಣು ಮಾಯೆಯಲ್ಲ ಹೊನ್ನು ಮಾಯೆಯಲ್ಲ ಎಂದರು ಅದೂ ಸರಿಯೇ, ಮಿತವಾಗಿದ್ದರೆ ಯಾವುದೂ ಮಾಯೆಯಲ್ಲ.
ನಾನು ಹೇಳುವುದಿಷ್ಟೇ ಎಲ್ಲವನ್ನೂ ಒಪ್ಪಿಕೊಳ್ಳಬೇಕು, ಅಪ್ಪಿಕೊಳ್ಳಬೇಕು. ನಮ್ಮದೇ ಶ್ರೇಷ್ಠ, ನಾವೇ ದೊಡ್ಡವರು ಎಂಬ ಅಹಂಕಾರವೇನಿದೆ ಅದು ಸರಿಯಲ್ಲ. ಅತಿಯಾಗಿ ಪ್ರೀತಿಸುವುದು, ಅತಿಯಾಗಿ ದ್ವೇಷಿಸುವುದು ಕೂಡ ಅಪಾಯಕಾರಿ. ದಾಸರು, ವಚನಕಾರರು, ಭಗದ್ಗೀತೆ ಎಲ್ಲ ಹೇಳುವುದು ಒಂದೇ. ಈ ಜೇವನ ಶಾಶ್ವತವಲ್ಲ , ಭಗವಂತನನ್ನು ಒಳಗಣ್ಣಿನಿಂದ ನೋಡು, ಆತನ ಸೃಷ್ಟಿಯಲ್ಲಿ ನೋಡು.
ಸಂಕುಚಿತ ಮನೋಭಾವವನ್ನು ಬಿಟ್ಟು ಸದಾಚಾರಗಳಿಂದ ಬದುಕೋಣ.
ಹರೇ ಕೃಷ್ಣ .
ಕವಿತಾ ವಿ ರಾವ್

No comments:
Post a Comment