ಇಂದಿಗೆ ಸುಮಾರು ೨೮ ವರ್ಷಗಳ ಹಿಂದೆ ನಡೆದ ಘಟನೆ. ಅದು ೧೯೯೦ ನೇ ಇಸವಿ ಜುಲೈ ತಿಂಗಳು.ನನಗಾಗ ೧೭ ವರ್ಷ ವಯಸು. ಹೈದರಾಬಾದಿನ ನನ್ನ ದೊಡ್ಡಪ್ಪನ ಮನೆಗೆ ಬೆಂಗಳೂರಿನಿಂದ ಬಸ್ ನಲ್ಲಿ ಹೊರಟೆ. ಇಲ್ಲಿ ರಾತ್ರಿ ಕುಳಿತರೆ ಮರುದಿನ ಬೆಳಗ್ಗೆ ಹೈದರಾಬಾದ್ ತಲುಪುತ್ತೇವೆ. ಒಬ್ಬಳೇ ಪ್ರಯಾಣ ಮಾಡುತ್ತಿದ್ದೆ. ರಾತ್ರಿ ನಿದ್ದೆ ಸರಿಯಾಗಿ ಬರುತ್ತಿರಲಿಲ್ಲ. ಮುಂದಿನ ಮಹಿಳೆಯರ ಸೀಟ್ ನಲ್ಲಿ ಕುಳಿದಿದ್ದೆ. ಎದುರಿನಿಂದ ಬರುತ್ತಿದ್ದ ಬಸ್ಸುಗಳ ಲೈಟು ಕಣ್ಣಿಗೆ ಹೊಡೆಯುತ್ತಿತ್ತು. ಆಲೋಚನೆಗಳು ಎಲ್ಲೆಲ್ಲೋ ಹೋಗುತ್ತಿದ್ದವು. ಹೀಗೊಂದು ಘಟನೆಯನ್ನು ನಾನು ಊಹಿಸಿಕೊಳ್ಳುತ್ತಿದ್ದೆ, ಒಬ್ಬ ವಯಸ್ಸಾದ ವ್ಯಕ್ತಿ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಇಳಿಯುತ್ತಾರೆ. ಅವರಿಗೆ ರಾಜಾಜಿನಗರಕ್ಕೆ ತಮ್ಮ ಬಂಧುಗಳ ಮನೆಗೆ ಹೋಗಬೇಕು ಆದರೆ ಹೇಗೆ ಹೋಗುವುದು ತಿಳಿಯುವುದಿಲ್ಲ. ನನ್ನನ್ನು ಕೇಳುತ್ತಾರೆ, ನಾನು ಅವರಿಗೆ ಸಹಾಯ ಮಾಡುವ ಸಲುವಾಗಿ ಅವರನ್ನು ರಾಜಾಜಿನಗರದ ಅವರ ಬಂಧುಗಳ ಮನೆ ತನಕ ಕರೆದುಕೊಂಡು ಹೋಗಿ ಬಿಟ್ಟು ನಂತರ ನನ್ನ ಮನೆಗೆ ಹೋಗಿ ಬಿಡುತ್ತೇನೆ. ಇದು ನನ್ನ ಊಹೆಯಲ್ಲಿ ನಡೆದ ಘಟನೆ. ಹೇಗೋ ನಿದ್ದೆ ಹತ್ತಿತು. ಬೆಳಕು ಹರಿಯುವ ಮುನ್ನವೇ ಹೈದರಾಬಾದ್ ಬಸ್ ನಿಲ್ದಾಣ ತಲುಪಿದೆ. ಇಳಿದೆ, ದೊಡ್ಡಪ್ಪ ನನ್ನನ್ನು ಕರೆದುಕೊಂಡು ಹೋಗಲು ಬರುವರೆಂದು ಕಾದೆ. ೭ ಆಯಿತು, ೮ ಆಯಿತು ಯಾರದು ಸುಳಿವಿಲ್ಲ. ನನ್ನ ಬಳಿ ವನಸ್ಥಲಿಪುರಂ ಸಿ-೪೪೪ ವಿಳಾಸ ಬಿಟ್ಟು ಇನ್ನೇನೂ ಇಲ್ಲ. ಹಾಗೆ ಒಬ್ಬಳೇ ಇದ್ದಿದ್ದು ಕಂಡು, ಆಟೋ
ಚಾಲಕರೊಬ್ಬರು ಇಬ್ಬರು ನನ್ನ ಬಳಿ ಬಂದು ಎಲ್ಲಿಗೆ ಹೋಗಬೇಕು ಎಂದು ಪೀಡಿಸತೊಡಗಿದರು. ಇದನ್ನೆಲ್ಲಾ ಗಮನಿಸುತ್ತಿದ್ದ ಒಬ್ಬ ಯುವಕ ನನ್ನನ್ನು ಕರೆದು ಹಾಗೆಲ್ಲ ಆಟೋದಲ್ಲಿ ಹೋಗಬೇಡ. ನನ್ನ ಮಾವ ಬೆಂಗಳೂರಿನಿಂದ ಬರುತ್ತಿದ್ದಾರೆ. ಅವರು ಬಂದೊಡನೆ ಬಸ್ ನಿಲ್ದಾಣದಲ್ಲಿ ಬಿಡುತ್ತೇನೆ ಎಂದನು. ಆತನೊಟ್ಟಿಗೆ ಆತನ ಸ್ನೇಹಿತನು ಇದ್ದನು. ಅವರಿಬ್ಬರೊಟ್ಟಿಗೆ ಅವರು ಯಾವ ಕಾಲೇಜಿನಲ್ಲಿ ಓದುತ್ತಿದ್ದಾ ರೆ... ಇನ್ನಿತರ ವಿಷಯಗಳನ್ನು ಚರ್ಚಿಸುತ್ತಾ ಕೂತೆ . ಎಷ್ಟು ಹೊತ್ತಾದರೂ ನನ್ನ ದೊಡ್ಡಪ್ಪ ನನ್ನನ್ನು ಕರೆದು ಕೊಂಡು ಹೋಗಲು ಬರಲಿಲ್ಲ. ಅವರ ಮಾವನ ಸುದ್ದಿಯೂ ಇರಲಿಲ್ಲ. ಆಗ ಆ ಹುಡುಗ ದೂರವಾಣಿ ಕರೆಯನ್ನು ಮಾಡಿ ಬಂದು ನನಗೆ ಹೇಳಿದ, " ನನ್ನ ಮಾವ ನಮ್ಮ ಮನೆಗೆ ಹೋಗಿದ್ದಾರೆ, ಈಗ ನಾನು ನಿನ್ನನ್ನು ವನಸ್ಥಲಿಪುರಂ ತನಕ ಬಿಟ್ಟು ಬರುತ್ತೇನೆ " ಎಂದ. ಧೈರ್ಯವಾಗಿ "ಜೈ ಹನುಮಾನ್'ಎಂದು ಅವರ ಕಾರಲ್ಲಿ ಕೂತೆ. ಹಿಂದಿ ಸಿನೆಮಾ ಹಾಡೊಂದು ಕೇಳಿ ಬರ್ತಾ ಇತ್ತು. ಈಗಲೂ ನೆನಪಿದೆ ದಿಲ್ ಸಿನೆಮಾದ ' ಓ ಪ್ರಿಯ ಪ್ರಿಯ". ಸುತ್ತ ನೋಡುತ್ತಾ ಕುಳಿತೆ. ಈಗಿನ ಹಾಗೆ ಗೂಗಲ್ ಮ್ಯಾಪ್ ಇಲ್ಲ. ೧೦೦ ವಿ ಬಸ್ಸು ವನಸ್ಥಲಿಪುರಂ ಕಡೆ ಹೋಗುವ ಬಸ್ಸುಗಳು ಹೋಗುವುದನ್ನು ಕಂಡೆ. ಅದು .. ಇದು.. ಅಂತ ಮಾತನಾಡುತ್ತಲೇ ಇದ್ದೆ. ಕಡೆಗೆ ವನಸ್ಥಲಿಪುರಂ ಸಿ-೪೪೪ ಮನೆಯನ್ನು ಹುಡುಕಿ ಅದರೆದಿರು ನಿಲ್ಲಿಸಿದಾಗ ರಾಜಕುಮಾರಿಯಂತೆ ಕಾರಿನಿಂದ ಇಳಿದೆ. ದೊಡ್ಡಮ್ಮ -ದೊಡ್ಡಪ್ಪ ಗೆ ಆಶ್ಚರ್ಯ. ಆ ಇಬ್ಬರು ಹುಡುಗರನ್ನು ಒಳಗೆ ಕರೆದು ಕಾಫಿ ಕೊಟ್ಟು ಮಾತನಾಡಿಸಿದರು. ನಂತರ ಅವರು ನಾವು ಹೋಗಿಬರುತ್ತೇವೆ ಎಂದು ಹೊರಟು ಹೋದರು. ಆಗ ನೆನಪಾಯಿತು, ಅವರ ಹೆಸರು ಕೇಳಲಿಲ್ಲ, ವಿಳಾಸ ಕೇಳಲಿಲ್ಲ, ಥ್ಯಾಂಕ್ಸ್ ಸಹಾ ಹೇಳಲಿಲ್ಲ. ದೇವರೇ ನನಗಾಗಿ ಅವರನ್ನು ಕಾಲಿಸಿದರು ಎಂದು ತಿಳಿದು ಜೈ ಹನುಮಾನ್ ಗೆ ಕೈ ಮುಗಿದೆ. ನಮ್ಮ ಸಕಾರಾತ್ಮಕ ಚಿಂತನೆಗಳು ನಮ್ಮನ್ನು ಹೇಗೆ ಸುರಕ್ಷಿತವಾಗಿ ಇಡುತ್ತವೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆ.

No comments:
Post a Comment