ಆ ದಿನ ನಾನು ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ, ಮನೆಗೆ ಹೋಗಲು ತಡವಾಯಿತು. ನನ್ನ ಎರಡನೇ ಮಗಳು ಕರೆ ಮಾಡಿ " ಅಮ್ಮ ಮನೆ ಮುಂದೆ ಒಂದು ನಾಯಿ ಬಿದ್ದಿದೆ, ಅದರ ಮೈಯಿಂದ ರಕ್ತ ಸುರಿತಾ ಇದೆ .. ಏನು ಮಾಡೋದು ಗೊತ್ತಾಗ್ತಾ ಇಲ್ಲ " ಎಂದು ಹೇಳಿದಳು . ಆಗ ನಾನು ಫೋನಿನಲ್ಲಿ ಏನೂ ಹೇಳಲು ಆಗಲಿಲ್ಲ. ಆ ನಾಯಿ ಅಪಘಾತದಲ್ಲಿ ಗಾಯಗೊಂಡು ಎಲ್ಲಿಂದಲೋ ಬಂದು ಮನೆಯ ಬಳಿ ಬಿದ್ದು ನರಳುತ್ತಿತ್ತು. ನನ್ನ ಮಗಳು ನಮ್ಮ ಮನೆಯ ಸಮೀಪದಲ್ಲಿದ್ದ ಓರ್ವ ಸಮಾಜ ಸೇವಕಿಯನ್ನು ಸಂಪರ್ಕಿಸಿ , ಆಕೆಯ ಸಲಹೆಯ ಮೇಲೆ ಆ ನಾಯಿಗಾದ ಗಾಯದ ಮೇಲೆ ಹರಿಶಿನ ಹಾಕಿ ನೀರು ಕೊಟ್ಟು ಸ್ವಲ್ಪ ಹೊತ್ತು ಶುಶ್ರುಷೆ ಮಾಡಿದಳು. ನಂತರ, ಸೇವಾಶ್ರಮದವರು ಬಂದು ಆ ನಾಯಿಯನ್ನು ಅವರ ಆಸ್ಪತ್ರೆಗೆ ಕೊಂಡೊಯ್ದರು. ನಾನು ಮನೆಗೆ ಹೋಗುವ ವೇಳೆಗೆ ಈ ಎಲ್ಲ ಕೆಲಸಗಳು ಮುಗಿದಿದ್ದವು. ಕೆಲವು ದಿನಗಳ ನಂತರ ಆ ನಾಯಿ ಪ್ರಾಣ ತ್ಯಜಿಸಿತು.
ಒಂದು ಪುಣ್ಯದ ಕೆಲಸ ಎಂದರೆ, ದೇವರನ್ನು ಪೂಜಿಸೋದು ಮಾತ್ರ ಅಲ್ಲ , ಆ ದೇವರ ಸೃಷ್ಟಿಯಾದ ಎಲ್ಲದರಲ್ಲೂ ದೇವರನ್ನು ಕಾಣಬೇಕು . ಗಿಡಕ್ಕೆ ನೀರು ಹಾಕೋದರಿಂದ ಹಿಡಿದು, ನಾಯಿಗೆ ಬಿಸ್ಕತ್ತು ಹಾಕುವವರೆಗೂ ಪುಣ್ಯಗಳೇ,. ಇಲ್ಲಿ ಒಂದು ಪ್ರಶ್ನೆ , ಪುಣ್ಯದ ಕೆಲಸ ಮಾಡೋದರಿಂದ ನಾವು ಪಾಪಗಳನ್ನು ಕಳೆದುಕೊಳ್ಳ ಬಹುದಾ ? ಸಾಧ್ಯವಿಲ್ಲ. ಪುಣ್ಯದ ಕೆಲಸ ಹೆಚ್ಚು ಹೆಚ್ಚು ಮಾಡುವುದರಿಂದ ಪಾಪ ಮಾಡುವ ಪ್ರಜ್ಞೆ ಕಡಿಮೆಯಾಗುತ್ತದೆ ಹೊರತು ಪಾಪವಲ್ಲ. ನಮ್ಮಲ್ಲಿ ಕೆಟ್ಟ ಆಲೋಚನೆಗಳು, ಕೇಡು ಮಾಡುವ ಉದ್ದೇಶಗಳು ಕಡಿಮೆಯಾಗುತ್ತವೆ. ಇದನ್ನೇ ಗೀತೆಯ ೭ ನೇ ಅಧ್ಯಾಯ ೨೮ ನೇ ಶ್ಲೋಕದಲ್ಲಿ ಹೇಳಿರುವುದು.
ಯಾರು ಪಾಪ ಮತ್ತು ಪುಣ್ಯ ಎರಡರಿಂದ ಮುಕ್ತನಾಗುತ್ತಾನೋ ಆತ ಯಾವ ದ್ವಂದ್ವಗಳಲ್ಲಿಯೂ ಸಿಲುಕದೆ ಭಗವಂತನ ಸೇವೆಯಲ್ಲಿ ನಿರತನಾಗುತ್ತಾನೆ.
ಹರೇ ಕೃಷ್ಣ
ಕವಿತಾ ವಿ. ರಾವ್
No comments:
Post a Comment