Wednesday, June 5, 2019

ನೋವು - ನಲಿವು

ಈ ದಿನ ನಾನು ರಕ್ತ ಪರೀಕ್ಷೆ  ಗೆ ಆಸ್ಪತ್ರೆ ಗೆ ಹೋಗಿದ್ದೆ. ಅಲ್ಲಿ ಸುಮಾರು ೬೦ ವರ್ಷದ ಹೆಂಗಸು ತನ್ನ ಗಂಡನೊಂದಿಗೆ ಬಂದಿದ್ದರು . ಟೆಕ್ನಿಷಿಯನ್ ಆಕೆಗೆ ಮೂತ್ರ ದ ಮಾದರಿ ತರಲು ಹೇಳಿದರು. ಮೂತ್ರ ವಿಸರ್ಜನೆ ಮಾಡುವಾಗ ಮಧ್ಯದ್ದು ಸಂಗ್ರಹಿಸಿ ಕೊಡಲು ಆದೇಶಿಸಿದಳು. ತಕ್ಷಣ ಆಕೆಯ ಗಂಡ ," ಅವಳು   ಯೂರಿನ್ ಬ್ಯಾಗ್ ಬಳಸುತ್ತಾಳೆ  , ಹೇಗೆ ಸಂಗ್ರಹಿಸುವುದು" ಎಂದು ಕೇಳಿದರು. ನನ್ನ ರಕ್ತವನ್ನು ಸಿರಂಜಿನೊಳಗೆ ಹತ್ತಿಸಿಕೊಳ್ಳುತ್ತಿದ್ದ ಬಿಳಿ ಕೋಟ್ ಹಾಕಿದ್ದ ಹೆಂಗಸು, ಅದು ತುಂಬಾ ಸಾಮಾನ್ಯ ವಿಷಯದಂತೆ  " ಅದಕ್ಕೆ ಬೇರೆ ಟೆಕ್ನಿಷಿಯನ್ ಬಂದು ಸಹಾಯ ಮಾಡುತ್ತಾರೆ" ಎಂದಳು. 
ಸ್ನೇಹಿತರೇ , ನಾನು ಹೇಳಲು ಬಂದಿರುವ ವಿಷಯ ಇಷ್ಟೇ,ಆಸ್ಪತ್ರೆಗೆ ಹೋದರೆ, ನಮಗಿಂತ ಹೆಚ್ಚು ನರಳುತ್ತಿರುವ ರೋಗಿಗಳು  ಸಿಗುತ್ತಾರೆ.  ಸಹಜವಾಗಿ ಮೂತ್ರ ವಿಸರ್ಜನೆ ಮಾಡಲಾಗದ ರೋಗಿಯನ್ನು ಕಂಡಾಗ, " ದುನಿಯಾ ಮೇ ಕಿತ್ನಾ ಗಾಮ್ ಹೈ ಮೇರಾ ಗಮ್  ಕಿತನಾ  ಕಮ್  ಹೈ" ಅನಿಸುತ್ತದೆ.
 ಪ್ರಪಂಚವನ್ನು ಕಣ್ತೆರೆದು ನೋಡಿ , ನಮಗಿಂತಾ  ಕಷ್ಟದಲ್ಲಿ ಇದ್ದವರನ್ನು ನೋಡಿ. "ದೇವರೇ ನಮಗೆ ಇಷ್ಟಾದರೂ ಕೊಟ್ಟದ್ದೀಯ " ಎಂದು ಧನ್ಯವಾದ  ಹೇಳಿ  . say thanks to god for giving good health.


No comments:

Post a Comment